

ನಿನ್ನೆ ಒಟ್ಟು 19 ಜನರು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರು. ಇನ್ನೂ ಆ ದಿನದಂದೇ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಯೂಟ್ಯೂಬರ್ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಲಾಗಿದ್ದು, ದೊಡ್ಮನೆಯಲ್ಲಿರುವ ಬಿಗ್ ಸ್ಪರ್ಧಿಗಳೆಲ್ಲಾ ಬೆರಗಾಗುವಂತೆ ಮಾಡಿದೆ.
Bigg Boss Kannada 12 : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್ಬಾಸ್ ಕನ್ನಡ ಸೀಸನ್ 12’ಗೆ ಭಾನುವಾರ ಸಂಜೆ 6ಕ್ಕೆ ಅದ್ದೂರಿ ಚಾಲನೆ ದೊರೆಯಿತು. ಇನ್ನೂ ಬಿಗ್ಬಾಸ್ ಕನ್ನಡ ಶುರುವಾದ ಒಂದೇ ದಿನಕ್ಕೆ ಮನೆಯೊಳಗಿನ ಸ್ಪರ್ಧಿಗಳಿಗೆ ಎಲಿಮಿನೇಷನ್ ಶಾಕ್ ಎದುರಾಗಿದೆ.
ನಟ ಸುಧೀ, ಮಂಜು ಭಾಷಿಣಿ, ರಕ್ಷಿತಾ, ಗಿಲ್ಲಿ ನಟ, ಚಂದ್ರಪ್ರಭಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪ್ರಿಯತೆ ಪಡೆದುಕೊಂಡ ಮುಖಗಳೇ ಈ ಬಾರಿಯ ಬಿಗ್ ಬಾಸ್ 12ಕ್ಕೆ ಎಂಟ್ರಿಕೊಟ್ಟಿದ್ದಾರೆ. ‘ಬಿಗ್’ ಮನೆಗೆ ಪ್ರವೇಶಿಸಿ ಇನ್ನೂ 24 ಗಂಟೆಗಳೂ ಕಳೆದಿಲ್ಲ! ಅದಾಗಲೇ ದೊಡ್ಮನೆ ಮಂದಿಗೆ ಸಖತ್ ಟ್ವಿಸ್ಟ್ ಎದುರಾಗಿದೆ. 19 ಸ್ಪರ್ಧಿಗಳು ಚರ್ಚಿಸಿ, ಒಮ್ಮತದಿಂದ ಯಾರು ಮನೆಯಿಂದ ಹೊರ ಹೋಗಬೇಕು ಎಂಬುದನ್ನು ನಿರ್ಧರಿಸಲು ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಮನೆಯಿಂದ ರಕ್ಷಿತಾ ಶೆಟ್ಟಿ ಹೊರಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾಗೂ ವ್ಲಾಗ್ ಮಾಡಿಕೊಂಡಿದ್ದ ರಕ್ಷಿತಾ ಶೆಟ್ಟಿ ತನ್ನ ಮಾತಿನ ಮೂಲಕವೇ ವೈರಲ್ ಆಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ, ಯೂಟ್ಯೂಬ್‌ನಲ್ಲಿ ಅಧಿಕ ಫಾಲೋವರ್ಸ್‌ಗಳನ್ನು ಸಹ ಹೊಂದಿದ್ದರು.