ನಟ Darshan ವಿರುದ್ಧ ದೂರು ದಾಖಲಿಸಿದ Bigg Boss ಸ್ಫರ್ಧಿ ಜಗದೀಶ್​; ಹೀಗಿದೆ ಕಾರಣ

Darshan Jagadish
Published on

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ (Darshan) ಬೆನ್ನು ನೋವಿನ ಕಾರಣದಿಂದಾಗಿ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದು, ಜೈಲುವಾಸದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದಂತಾಗಿದೆ. ಆದರೆ, ದಾಸನಿಗೆ ಮಧ್ಯಂತರ ಜಾಮೀನು ದೊರೆತ ಬೆನ್ನಲ್ಲೇ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿದ್ದು, ಪೊಲೀಸರು ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ನಟ ದರ್ಶನ್​ ವಿರುದ್ಧ ಬಿಗ್​ಬಾಸ್​ (Bigg Boss) ಸ್ಫರ್ಧಿ ಜಗದೀಶ್​ (Jagadish) ದೂರು ದಾಖಲಿಸಿದ್ದಾರೆ.

ಬಿಗ್​ಬಾಸ್​ 11ನೇ ಆವೃತ್ತಿಯಲ್ಲಿ ಲವರ್​ ಬಾಯ್​ ಆಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿ ಮನೆಯಿಂದ ನೇರವಾಗಿ ಎಲಿಮಿನೇಟ್​ ಆಗಿದ್ದ ಜಗದೀಶ್​ ಇದೀಗ ರಿಯಾಲಿಟಿ ಶೋಗಳಲ್ಲೂ (Reality Shows) ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜಗದೀಶ್​ (Jagadish) ಅವರು ಪ್ರಸ್ತುತ ವಿದ್ಯಮಾನಗಳ ಕುರಿತು ವಿಡಿಯೋ ಮಾಡಿ ಹರಿಬಿಡುತ್ತಿರುತ್ತಾರೆ. ಇದಲ್ಲದೆ ನಟ ದರ್ಶನ್​ (Darshan) ಪ್ರಕರಣದ ಕುರಿತಾಗಿಯೂ ಮಾತನಾಡಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.

ನಟ ದರ್ಶನ್ (Darshan)​ ಪ್ರಕರಣದ ಬಗ್ಗೆ ಮಾತನಾಡುವಾಗ ತಮ್ಮ ಎಂದಿನ ಶೈಲಿಯಲ್ಲೇ ಏಕವಚನದಲ್ಲೇ ಜಗದೀಶ್​ (Jagadish) ವಾಗ್ದಾಳಿ ನಡೆಸಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು (Darshan Fans) ವಿರೋಧ ವ್ಯಕ್ತಪಡಿಸಿದ್ದರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪೋಸ್ಟ್ (Controversial Post) ಹಾಗೂ ಬೆದರಿಕೆ​ ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ ಈ ವಿಚಾರವಾಗಿ ಜಗದೀಶ್​ (Jagadish) ಅವರು ನಟ ದರ್ಶನ್​ (Darshan) ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದರ್ಶನ್​ಗೆ (Darshan) ನಾನು ಏಕವಚನದಲ್ಲಿ ಮಾತನಾಡಿದ್ದೇನೆ ಎಂದು ದರ್ಶನ್ ಅಭಿಮಾನಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಎರಡು ದಿನದಲ್ಲಿ ಸಾವಿರಕ್ಕೂ ಹೆಚ್ಚು ಕರೆಗಳನ್ನು ದರ್ಶನ್​ರ ಕೆಲ ಅಭಿಮಾನಿಗಳು ನನಗೆ ಮಾಡಿದ್ದಾರೆ. ದರ್ಶನ್ ಅಭಿಮಾನಿ ರಿಷಿ (Rishi) ಎಂಬಾತ ಹಲವು ಬಾರಿ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೆಲ್ಲ ದರ್ಶನ್​ ಮಾಡಿಸಿದ್ದಾರೆ. ದರ್ಶನ್​ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದು, ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ನಮಗೆ ರಕ್ಷಣೆ ಕೊಡುವ ಜೊತೆಗೆ ದರ್ಶನ್​ ಹಾಗೂ ರಿಷಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್​ (Jagadish) ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net