

ಮುಂಬೈ: ಕನ್ನಡ, ತೆಲುಗು, ಹಿಂದಿ ಹೀಗೆ ಸಾಲು ಸಾಲು ಬಿಗ್ಬಾಸ್ ಬಗ್ಗೆ ಬಿಗ್ ಅಪ್ಡೇಟ್ಗಳು ಬರುತ್ತಿವೆ. ಇದೇ ಸೆಪ್ಟೆಂಬರ್‌ನಿಂದ ತೆಲುಗಿನ ಬಿಗ್ಬಾಸ್ ಸೀಸನ್- 8 ಶುರುವಾಗುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಯಾವ ಸ್ಪರ್ಧಿಗಳು ಬರುತ್ತಾರೆ ಎನ್ನುವ ಪ್ರಶ್ನೆ ಬಿಗ್ಬಾಸ್ ಅಭಿಮಾನಿಗಳಿಗೆ ಇದ್ದೆ ಇರುತ್ತದೆ. ಇದೀಗ ಈ ಪಟ್ಟಿಯಲ್ಲಿ ಕನ್ನಡದ ನಟಿ ಇಶಾ ಕೊಪಿಕರ್ ಅವರು ಹೆಸರು ಕೂಡಾ ಕೇಳಿ ಬರುತ್ತಿದೆ.
ಸದ್ಯ ಈ ಬಾರಿಯ ಬಿಗ್ಬಾಸ್ಗೆ ಸಾಕಷ್ಟು ಸ್ಟಾರ್ಗಳ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಿಗ್ಬಾಸ್ ಸೀಸನ್ 18ಕ್ಕೆ ಕನ್ನಡದ ‘ಸೂರ್ಯವಂಶ’ ಸಿನಿಮಾದಲ್ಲಿ ನಟ ವಿಷ್ಣುವರ್ಧನ್ ಜೊತೆ ನಟಿಸಿದ್ದ ಇಶಾ ಕೊಪ್ಪಿಕರ್ ಅವರು ಎಂಟ್ರಿ ಕೊಡಲಿದ್ದಾರೆ.
ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್ ಅವರ ಶೋನಲ್ಲಿ ಮೊದಲ ದೃಢಪಡಿಸಿದ ಸ್ಪರ್ಧಿಯಾಗಿದ್ದಾರೆ.
‘ಸೂರ್ಯವಂಶ’, ಅವರು ನಟಿಸಿದ ಮೊದಲ ಕನ್ನಡ ಸಿನಿಮಾವಾಗಿದೆ. ಬಳಿಕ ನಟ ರವಿಚಂದ್ರನ್ ಅವರ ನಟನೆಯ ‘ಓ ನನ್ನ ನಲ್ಲೆ’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಪರಭಾಷೆಯಲ್ಲೂ ಈಕೆ ನಟಿಸುವ ಮೂಲಕವಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.