Bigg Boss 13: ‘ಆಕೆ ಸ್ನಾನವೇ ಮಾಡಲ್ಲ’..! ಎಲಿಮಿನೇಟ್ ಆದ ಲಕ್ಷ್ಮಿ ಗೌಡ ಆರೋಪ ಮಾಡಿದ್ದು ಯಾರ ಮೇಲೆ?

Bigg Boss 13, Lakshmi Gowda
ಕುಮಾರಿ ವಿರುದ್ಧ 'ಅನ್‌ಹೈಜಿನಿಕ್' ಆರೋಪ ಮಾಡಿದ ಲಕ್ಷ್ಮಿ ಗೌಡ
Published on: 

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ 6ನೇ ವಾರ ಮುಗಿದಿದ್ದು, ಅಗ್ನಿಪರೀಕ್ಷೆ ಟಾಸ್ಕ್ ಮೂಲಕ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಲಕ್ಷ್ಮಿ ಗೌಡ ಕಡಿಮೆ ವೋಟ್‌ಗಳಿಂದಾಗಿ ಎಲಿಮಿನೇಟ್ ಆಗಿದ್ದಾರೆ. ಸದ್ಯ ದೊಡ್ಮನೆಯಿಂದ ಆಚೆ ಬಂದಿರುವ ಲಕ್ಷ್ಮಿ ಗೌಡ, ಹೇಳಿಕೆ ಮೂಲಕ ಸಖತ್ ವೈರಲ್ ಆಗಿದ್ದಾರೆ.

ಬಿಗ್ ಬಾಸ್‌ನಿಂದ ಆಚೆ ಬಂದ ಮೇಲೆ ಸಿಗೋ ಕ್ರೇಜ್‌ಗೆ ತಕ್ಕಂತೆ ಲಕ್ಷ್ಮಿ ಕೂಡ ಸಾಲು ಸಾಲು ಮೀಡಿಯಾಗಳಿಗೆ ಇಂಟರ್ವ್ಯೂ ಕೊಡುತ್ತಿದ್ದು, ಹಲವು ರಹಸ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಲಕ್ಷ್ಮಿ ಗೌಡ, ಬಿಗ್ ಬಾಸ್ ಮನೆಯ ಹೈಲೈಟ್ ಸ್ಪರ್ಧಿ ಕುಮಾರಿ ಬಗ್ಗೆ ಬಾಂಬ್ ಸಿಡಿಸಿದ್ದಾರೆ.

ಕುಮಾರಿ ಸ್ನಾನವೇ ಮಾಡಲ್ಲ, ಅನ್‌ಹೈಜಿನಿಕ್

ಸಂದರ್ಶನದಲ್ಲಿ ಆಂಕರ್ ‘ಮನೆಯಲ್ಲಿ ಅತ್ಯಂತ ಅನ್‌ಹೈಜಿನಿಕ್ (ಅಶುಚಿ) ವ್ಯಕ್ತಿ ಯಾರು?’ ಎಂದು ಕೇಳಿದ್ದಕ್ಕೆ ಲಕ್ಷ್ಮಿ ತಟ್ಟನೆ ಕುಮಾರಿ ಹೆಸರನ್ನು ಹೇಳಿದ್ದಾರೆ. ‘ಕುಮಾರಿ ಬಿಗ್ ಬಾಸ್ ಮನೆಯಲ್ಲಿ ಸರಿಯಾಗಿ ಸ್ನಾನವೇ ಮಾಡಲ್ಲ. ಆಕೆ ಅಪರೂಪಕ್ಕೊಮ್ಮೆ ಸ್ನಾನ ಮಾಡಿದರೆ ಮನೆಯವರೆಲ್ಲಾ ಹಬ್ಬದಂತೆ ಸಂಭ್ರಮಿಸುತ್ತಾರೆ. ಆಕೆಯ ನಡವಳಿಕೆ ನೋಡಿ ನನಗಂತೂ ಅಸಹ್ಯ ಅನಿಸಿತು’ ಎಂದು ಲಕ್ಷ್ಮಿ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಆರಂಭದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಕುಮಾರಿಯನ್ನು ಅಗ್ನಿಪರೀಕ್ಷೆ ಟಾಸ್ಕ್‌ನಲ್ಲಿ ಹೋಲ್ಡ್‌ನಲ್ಲಿ ಇಡಲಾಗಿತ್ತು. ಆದರೆ ಶೋ ಡಲ್ ಆಗಿದೆ ಎಂಬ ವೀಕ್ಷಕರ ದೂರಿಗೆ ಸ್ಪಂದಿಸಿದ ಮೇಲಧಿಕಾರಿಗಳು, ರಕ್ಷಿತಾ ಶೆಟ್ಟಿ ತರ ಎಂಟರ್‌ಟೇನ್ ಮಾಡ್ತಾರೆ ಅನ್ನೋ ನಿರೀಕ್ಷೆಯಿಂದ ಕುಮಾರಿಯವರನ್ನು ಮನೆಗೆ ಕಳಿಸಿದ್ದರು.

ಇದನ್ನೂ ಓದಿ: B.Com ಮುಗಿಸಿ BMTC ಬಸ್ ಡ್ರೈವರ್ ಆದ ಯುವಕ! ಕೈಗೆ ಸಿಗೋದು 22 ಸಾವಿರ ಸಂಬಳ; ಬೆಂಗಳೂರಲ್ಲಿ ಬದುಕೋದು ಹೆಂಗೆ? | BMTC Bus Driver

ಎಲಿಮಿನೇಟ್ ಆದ ಬಳಿಕ ಲಕ್ಷ್ಮಿ ಗೌಡ ಭಾವುಕ ಪೋಸ್ಟ್

ಶೋನಿಂದ ಆಚೆ ಬಂದ ತಕ್ಷಣ ಲಕ್ಷ್ಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರಿಗೆ ಧನ್ಯವಾದ ತಿಳಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನನ್ನ ಬಿಗ್ ಬಾಸ್ ಪಯಣ ಮುಗಿದರೂ ನಿಮ್ಮ ಪ್ರೀತಿ-ಆಶೀರ್ವಾದ ಸದಾ ಇರುತ್ತದೆ, ನನ್ನನ್ನು ನಂಬಿ ವೋಟ್ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು, ನಿಮ್ಮ ಪ್ರೀತಿಯೇ ನನ್ನ ಶಕ್ತಿ’ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net