

ಬೆಂಗಳೂರು: ಬಿಗ್ಬಾಸ್(BigBoss 11 Kannada) ಸೀಸನ್ 11ರಲ್ಲಿ ಅಳಿಯ-ಮಾವ ಆಗಿರುವ ಸ್ಪರ್ಧಿಗಳಾದ ಹನುಮಂತು ಮತ್ತು ಗೋಲ್ಡ್ ಸುರೇಶ್ ಬಿಗ್ಬಾಸ್ ಮನೆಯಲ್ಲಿ ಒಬ್ಬರನ್ನೊಬ್ಬರು ಅಳಿಯ ಮಾವ ಎನ್ನುವ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.
ಇಬ್ಬರು ಜೋಡಿಗಳು ಸಖತ್ ಎಂಟರ್ಟೈನ್ಮೆಂಟ್ ನೀಡುವುದ ಜತೆಗೆ ನಾಡಿನ ಜನರ ವಿಶೇಷ ಗಮನ ಸೆಳೆದಿದ್ದಾರೆ. ಅದರೆ, ಗೋಲ್ಡ್ ಸುರೇಶ್ ಅನಿವಾರ್ಯ ಕಾರಣದಿಂದ ಮನೆಯಿಂದ ಹೊರನಡೆದಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುರೇಶ್, ಹನುಮಂತನ ಬಗ್ಗೆ ಕೊಂಡಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಸುರೇಶ್, '' ಹನುಮಂತ ನನ್ನ ಅಳಿಯ. ಅವನ ಪ್ರೀತಿ ನನ್ನ ಮೇಲೆ ಇದೆ. ನಾನು ಅವನಿಗೆ ಅಬಾರಿಯಾಗಿದ್ದೇನೆ. ಬಿಗ್ಬಾಸ್ ಮನೆಯಲ್ಲಿ ಮಾತ್ರವಲ್ಲ. ಅವನು ಹೊರಗೆ ಬಂದರೂ ಅವನ ಮೇಲೆ ಎಳಷ್ಟು ಪ್ರೀತಿ ಕಡಿಮೆಯಾಗಲ್ಲ. ಅವನ ಜತೆ ನನಗೆ ತುಂಬಾ ಅಟ್ಯಾಚ್ಮೆಂಟ್ ಬೆಳದಿದೆ ಎಂದು ಹೇಳಿರುವ ಸುರೇಶ್, ಯಾಕೆ ಅಂತ ಗೊತ್ತಿಲ್ಲ, ಆದರೆ ಅವನು ತುಂಬಾ ಇಷ್ಟ,. ಹೀಗಾಗಿ ನಾನೇ ಮುಂದೆ ನಿಂತು ಜವಾಬ್ದಾರಿ ತೆಗೆದುಕೊಂಡು ಅವನ ಮದುವೆ ಮಾಡುತ್ತೇನೆ'' ಎಂದು ಹೇಳಿದ್ದಾರೆ.
ಇನ್ನು ಗೋಲ್ಡ್ ಸುರೇಶ್ ಯಾಕೆ ದಿಢೀರ್ ಹೊರ ಬಂದಿದ್ದಾರೆ ಎಂದು ಎಲ್ಲರು ಕೇಳುತ್ತಿದ್ದಾರೆ. ಹೀಗಾಗಿ, ಇದಕ್ಕೆ ಉತ್ತರ ಕೊಟ್ಟ ಸುರೇಶ್ ಇದನ್ನೂ ಬಿಗ್ಬಾಸ್ ಕಾರ್ಯಕ್ರಮ ಮುಗಿಯುವರೆಗೂ ತಿಳಿಸಿಲ್ಲ ಎಂಬಂತೆ ಪರೋಕ್ಷವಾಗಿ ಹೇಳಿದ್ದಾರೆ.
ಅಲ್ಲದೇ, ಹನುಮಂತು ಕೂಡ ತಮ್ಮ ಮದುವೆಯ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಮನೆಯಿಂದ ಹೊರಹೊದ ತಕ್ಷಣ ಪಾಲಕರು ಮದುವೆ ಸಿದ್ಧತೆ ನಡೆಸುತ್ತಾರೆ ಎಂದು ಹೇಳಿದ್ದರು,(ಎಜೆನ್ಸೀಸ್).