ಸುದೀಪ್‌ ನಟನೆಯ ಮ್ಯಾಕ್ಸ್ʼನಿಂದ ಜು.16ಕ್ಕೆ ಬಿಗ್ ಅಪ್ಡೇಟ್​!

max
Published on

ಬೆಂಗಳೂರು: ಸುದೀಪ್ ನಟನೆಯ ʼಮ್ಯಾಕ್ಸ್ʼ ಸೆಟ್ಟೇರಿದ್ದರೂ ಅಷ್ಟಾಗಿ ಅಪ್ಡೇಟ್ ಸಿಗದ ಕಾರಣ ಕಿಚ್ಚ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ ಈಗ ಚಿತ್ರಕ್ಕಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಹೊರಬಿದ್ದಿದೆ.

ಮಾಕ್ಸ್​ ಶೂಟಿಂಗ್ ಮುಗಿಸದಿದ್ದು, ಶೀಘ್ರದಲ್ಲೇ ಬಿಗ್ ಅಪ್ಡೇಟ್ ನೀಡುವುದಾಗಿ ಚಿತ್ರನಿರ್ಮಾಪಕರು ಇತ್ತೀಚೆಗೆ ಹೇಳಿದ್ದರು. ಟೀಸರ್ ಆದರೂ ರಿಲೀಸ್ ಮಾಡಿ ಎಂದೂ ಅಭಿಮಾನಿಗಳು ಒತ್ತಾಯಿಸಿದ್ದರೂ, ಸುಮ್ಮನಿದ್ದವರು ಈಗ ಇದೇ ಜುಲೈನಲ್ಲಿ ಮಾಹಿತಿ ನೀಡ್ತೇವೆ ಎನ್ನುತ್ತಿದ್ದಾರೆ.

ಚಿತ್ರತಂಡ ಇದೀಗ ಬಿಗ್ ಅಪ್ಡೇ ಟ್ ಯಾವಾಗ ಸಿಗಲಿದೆ ಎನ್ನುವುದನ್ನು ರಿವೀಲ್ ಮಾಡಿದೆ. ಜುಲೈ.16 ರಂದು ಮಧ್ಯಾಹ್ನ 12:30ಕ್ಕೆ ಮ್ಯಾಕ್ಸ್ʼ ಬಿಗ್ ಅಪ್ಡೇ ಟ್ ಬರಲಿದೆ ಎಂದು ಕೆಆರ್ ಜಿ ಹೇಳಿದೆ. ಇದನ್ನು ಕಿಚ್ಚ ಸುದೀಪ್‌ ಸಹ ಹಂಚಿಕೊಂಡಿದ್ದಾರೆ.

ಜು.16 ರಂದು ʼಮ್ಯಾಕ್ಸ್ʼ ಟೀಸರ್ ಬರುತ್ತೋ ಟ್ರೇ ಲರ್ ಬರುತ್ತೋ ಅಥವಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತೋ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ಸ್​ ಮಾಡುತ್ತಿದ್ದಾರೆ.

ಇನ್ನು ಇದೇ ವರ್ಷ ʼಮ್ಯಾಕ್ಸ್ʼ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಮ್ಯಾಕ್ಸ್ ಥಿಯೇಟರ್ ಗೆ ಎಂಟ್ರಿ ಕೊಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net