ತುಂಗಾ ಡ್ಯಾಂನಲ್ಲಿ ಬಲೆಗೆ ಬಿದ್ದ ಭಾರೀ ಗಾತ್ರದ ಮೀನು

IMG-20210306-WA0087-696x522 (1)
Published on

ಶಿವಮೊಗ್ಗ: ತುಂಗಾ ಜಲಾಶಯದಲ್ಲಿ ಭಾರೀ ಗಾತ್ರದ ಮೀನೊಂದು ದೊರೆತಿದ್ದು ಸ್ಥಳೀಯ ಮೀನುಗಾರರು ಮತ್ತು ಜನರು ಶಾಕ್ ಗೆ ಒಳಗಾದರು.
ಶನಿವಾರ ಬೆಳಗ್ಗೆ ಗಾಜನೂರು ಡ್ಯಾಂನಲ್ಲಿ ಮೀನಿಗಾಗಿ ಬಲೆ ಬೀಸಲಾಗಿದ್ದ ಮೀನುಗಾರರಿಗೆ ಶಾಕ್ ಕಾದಿತ್ತು. ತಾವು ಹಾಕಿದ್ದ ಬಲೆಗೆ 53 ಕೆ.ಜಿ. ಸುರಗಿ ಮೀನು ಬಲೆಗೆ ಬಿದ್ದಿದ್ದು, ಅಚ್ಚರಿ ಉಂಟುಮಾಡಿದೆ.
ಇಷ್ಟು ದೊಡ್ಡ ಗಾತ್ರದ ಮೀನನ್ನು ನಗರದ ಮೀನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಯಿತು. ಸಾಮಾನ್ಯವಾಗಿ ಸುರಿಗಿ ಅಥವಾ ಕುರುಡಿ ಮೀನನ್ನು ಕೆಜಿಗೆ 300 ರೂ. ಮಾರಾಟ ಮಾಡಲಾಗುತ್ತದೆ. ಆದರೆ ಈ ಬೃಹತ್ ಗಾತ್ರದ ಮೀನನ್ನು ಹಂಚಿಕೆ ಮಾಡಿ ಮಾರಾಟ ಮಾಟಿದ್ದು, ಕೆಜಿಗೆ 400 ರೂ.ಗೆ ಮಾರಾಟ ಮಾಡಲಾಗಿದೆ.
ಈ ಮೀನು ವಿವಿಧ ಖಾಯಿಲೆಗಳಿಗೆ ರಾಮಬಾಣ ಎನ್ನಲಾಗಿದ್ದು ಮೀನು ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮೀನು ಕಂಡು ಮೀನು ಖರೀದಿಸಲು ಬಂದವರು ಕೂಡ ಶಾಕ್ ಆಗಿದ್ದರು. ಕೆಲವರು ಮೀನಿನ ಜೊತೆ ಕೂಡ ತೆಗೆದುಕೊಂಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net