

Prediction: ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ಬಾಬಾ ವಂಗಾ ರವರ ಕೆಲವು ಭವಿಷ್ಯವಾಣಿಗಳು ಜ್ಯೋತಿಷ್ಯ ಚಲನೆಗಳು ಮತ್ತು ಗ್ರಹಗಳ ಚಲನೆಗಳಿಗೆ ಸಂಬಂಧಿಸಿವೆ ಎಂದು ಜ್ಯೋತಿಷಿಗಳು ಮತ್ತು ಆಧ್ಯಾತ್ಮಿಕ ನಾಯಕರು ನಂಬುತ್ತಾರೆ. ಇದೀಗ ಈ ವರ್ಷಗಳಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ.
ವರದಿಗಳ ಪ್ರಕಾರ ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡುಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
2026 ಮತ್ತು 2028 ರ ನಡುವೆ ಪ್ರಪಂಚದಿಂದ ಹಸಿವು ನಿವಾರಣೆಯಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಆಹಾರದ ಕೊರತೆಯನ್ನು ಹೋಗಲಾಡಿಸಲು ಜನರು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. 2026 ರಲ್ಲಿ ಚೀನಾ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ಅಮೆರಿಕವನ್ನು ಮೀರಿಸುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಮುಂದಿನ ವರ್ಷ ಮೂರನೇ ಮಹಾಯುದ್ಧ ನಡೆಯಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ವಿವಿಧ ದೇಶಗಳ ನಡುವೆ ಯುದ್ಧಗಳು ನಡೆಯುತ್ತಿವೆ. ಗಾಜಾ ಹಾಗೂ ಇಸ್ರೇಲ್ ಮತ್ತು ರಷ್ಯಾ-ಉಕ್ರೇನ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಯುದ್ಧಗಳು ನಡೆದಿವೆ. ಈ ವರ್ಷ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಉದ್ವಿಗ್ನತೆ ಉಂಟಾಗಿದೆ. ಮುಂದಿನ ವರ್ಷ ವಿವಿಧ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ.
ಈ ಮೇಲೆ ಉಲ್ಲೀಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
ಕೃತಕ ಬುದ್ಧಿಮತ್ತೆ (AI) ಜಗತ್ತಿನ ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ. ಇದು ಯುದ್ಧಗಳಲ್ಲಿ AI-ಆಧಾರಿತ ಸೈಬರ್ ದಾಳಿಗಳನ್ನು ಸೃಷ್ಟಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಭೂಕಂಪಗಳು, ಅಗ್ನಿಪರ್ವತ ಸ್ಫೋಟಗಳು, ಮತ್ತು ಹವಾಮಾನ ಬದಲಾವಣೆಗಳು ಜಗತ್ತಿನ ಹಲವು ಭಾಗಗಳನ್ನು ಸುಟ್ಟುಹಾಕಲಿವೆಯಂತೆ.