Bigg Boss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು ಶೋಭಾ ಶೆಟ್ಟಿ, ರಜತ್!

bb
Published on

 ಬೆಂಗಳೂರು:(Bigg Boss Kannada) ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇವತ್ತು ಬಿಗ್​ಸಬಾಸ್​ ಮನೆಯಿಂದ ಅನುಷಾ ರೈ ಮನೆಯಿಂದ ಆಚೆ ಬರುತ್ತಾರೆ ಎನ್ನುವ  ಸುದ್ದಿ ಇದೆ. ಆದರೆ ಈ ಕುರಿತಾಗಿ ಯಾವುದೇ ಖಚಿತ ಮಾಹಿತಿ ಇಲ್ಲ. ಇದೇ ಸುದ್ದಿ ಬೆನ್ನಲ್ಲೇ ಇದೀಗ ಈ ದೊಡ್ಮನೆಗೆ  ಹನುಮಂತ ನಂತ್ರ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಇಬ್ಬರು ಸ್ಪರ್ಧಿಗಳು ಬಂದಿದ್ದಾರೆ.

ಈಗಾಗಲೇ ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಹನುಮಂತ್ ಗೆ ಉತ್ತಮ ಫಾಲೋಯಿಂಗ್ ಸಿಗುತ್ತಿದೆ. ಅಲ್ಲದೇ ಇಬ್ಬರು ಸೆಲೆಬ್ರಿಟಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿತ್ತು. ಅದರಲ್ಲಿ ಶೋಭಾ ಕೂಡ ಇದ್ದಾರೆ.

ಕಿರುತೆರೆ ನಟಿ ಶೋಭಾ ಶೆಟ್ಟಿ ಮತ್ತು ರಜತ್ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಾಗಿ ಬಿಗ್​ಬಾಸ್​​ ತಂಡ ಇಂದ ಆಗಲಿ ಅಥವಾ ವಾಹಿನಿ, ಸ್ಪರ್ಧಿಯಿಂದ ಆಗಲಿ ಯಾವುದೇ ಖಚಿತ ಮಾಹಿತಿ ಇರಲಿಲ್ಲ. ಆದರೆ ಈಗ ಸೋಶಿಯಲ್​​ ಮೀಡಿಯಾದಲ್ಲಿ  ಹಂಚಿಕೊಂಡಿರುವ ಪ್ರೋಮೋ ಮೂಲಕವಾಗಿ ಇದು ತಿಳಿದು ಬಂದಿದೆ.

ಶೋಭಾಶೆಟ್ಟಿ ಬಿಗ್ ಬಾಸ್ ಗೆ ಹೊಸಬರಲ್ಲ. ಬಿಗ್ ಬಾಸ್ ತೆಲುಗು ಸೀಸನ್ 7ರಲ್ಲಿ ಭಾಗವಹಿಸಿದ್ದರು. ಆದರೆ ಅವಳ ಆಟದ ಶೈಲಿಯಿಂದ  ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಪ್ರವೇಶಿ ಸಿದ್ದಾರೆ. ಕನ್ನಡದಲ್ಲಿ ‘ಅಗ್ನಿಸಾಕ್ಷಿ’, ‘ನಮ್ಮ ರುಕ್ಕು’ ಧಾರಾವಾಹಿಯಲ್ಲಿ ನಟಿಸಿದ್ದ ಶೋಭಾ ಶೆಟ್ಟಿ.

ಇನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡುತ್ತಿರುವ ರಜತ್ ಬುಜ್ಜಿ ಸಹ ನಟರಾಗಿದ್ದು, ಕಿರುತೆರೆ ಧಾರಾವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಸೀಸನ್​ನಲ್ಲಿ ಹನುಮಂತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಮನೆ ಪ್ರವೇಶಿಸಿದ್ದಾರೆ. ಚೆನ್ನಾಗಿ ಆಟ ಆಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net