ಕರ್ಫ್ಯೂ ಇದೆ ಅಂತ ಆ್ಯಂಬುಲೆನ್ಸ್​ನಲ್ಲಿ ಪ್ರಯಾಣಿಸಿದ ಬಿಗ್​ ಬಾಸ್​ ಸ್ಪರ್ಧಿ

bigboss
Published on

ಮುಂಬೈ : 'ಹಿಂದೂಸ್ತಾನಿ ಭಾವು' ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 13ನೇ ಆವೃತ್ತಿಯ ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಮುಂಬೈ ನಗರದಲ್ಲಿ ಆ್ಯಂಬುಲೆನ್ಸ್​ ಬಳಸಿಕೊಂಡು ಶಿವಾಜಿ ಪಾರ್ಕ್​ ತಲುಪಿ, ಪ್ರತಿಭಟನೆ ಕೈಗೊಂಡ ಫಾಟಕ್​​ರನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ವಿವಾದಾತ್ಮಕ ವಿಡಿಯೋಗಳಿಗೆ ಹೆಸರಾಗಿರುವ ಗಾಯಕ ಫಾಟಕ್​, 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ನಗರದಲ್ಲಿ ಓಡಾಟದ ಮೇಲೆ ನಿರ್ಬಂಧ ಇರುವ ಕಾರಣ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಆ್ಯಂಬುಲೆನ್ಸ್​ ಒಂದನ್ನು ಬುಕ್​ ಮಾಡಿಕೊಂಡು ಶಿವಾಜಿ ಪಾರ್ಕ್​ಗೆ ಪ್ರಯಾಣಿಸಿದ್ದರು ಎನ್ನಲಾಗಿದೆ.

ಸ್ಥಳೀಯ ಪೊಲೀಸ್​ ತಂಡವೊಂದು 12.30ರ ವೇಳೆಗೆ ಫಾಟಕ್​ರನ್ನು ಬಂಧಿಸಿತು. ಅವರ ವಿರುದ್ಧ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ ಮತ್ತು ಕರೊನಾ ರೋಗ ಹರಡುವ ಅಪಾಯವನ್ನು ಸೃಷ್ಟಿಸಿದ ಆರೋಪಗಳ ಅಡಿಯಲ್ಲಿ ಎಫ್​.ಐ.ಆರ್. ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net