ಬಿಗ್ ಬಾಸ್​ ಖ್ಯಾತಿಯ ಅಜಾಜ್ ಖಾನ್ ಡ್ರಗ್ಸ್ ಕೇಸಲ್ಲಿ ಅರೆಸ್ಟ್

ajaz
Published on

ಮುಂಬೈ : ಬಾಲಿವುಡ್ ನಟ ಮತ್ತು ಹಿಂದಿ ಬಿಗ್ ಬಾಸ್​ ಸರಣಿಯ ಸ್ಪರ್ಧಿಯಾಗಿದ್ದ ಅಜಾಜ್ ಖಾನ್​ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಡ್ರಗ್ಸ್ ಕೇಸಲ್ಲಿ ಬಂಧಿಸಿದೆ. ಡ್ರಗ್​ ಪೆಡ್ಲರ್ ಶಾದಬ್​ ಬಟಾಟ ವಿಚಾರಣೆಯ ವೇಳೆ ಖಾನ್​ರ ಹೆಸರು ಹೊರಬಿದ್ದಿತ್ತು ಎನ್ನಲಾಗಿದೆ.

ನಿನ್ನೆ (ಮಾರ್ಚ್ 30) ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಖಾನ್​ರನ್ನು ಎನ್​ಸಿಬಿ ಜೋನಲ್ ಘಟಕವು ವಶಕ್ಕೆ ತೆಗೆದುಕೊಂಡಿದೆ. ಮುಂಬೈ ದಕ್ಷಿಣ ಭಾಗದಲ್ಲಿರುವ ಬ್ಯೂರೋದ ಕಚೇರಿಯಲ್ಲಿ ವಿಚಾರಣೆ ನಡೆಸಿ ತಡ ರಾತ್ರಿ ಹೇಳಿಕೆ ದಾಖಲಿಸಲಾಯಿತು. ಅಪರಾಧದಲ್ಲಿ ಖಾನ್ ಪಾತ್ರವನ್ನು ಪರಿಶೀಲಿಸಿದ ಎನ್​ಸಿಬಿ ಅಧಿಕಾರಿಗಳು ಆತನ್ನನ್ನು ಬಂಧನದಲ್ಲಿರಿಸಿದ್ದಾರೆ ಎನ್ನಲಾಗಿದೆ.

ಇದೇ ಕೇಸಿಗೆ ಸಂಬಂಧಿಸಿದಂತೆ ಎನ್​ಸಿಬಿ ಜೋನಲ್ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದಲ್ಲಿ ಮುಂಬೈನ ಅಂಧೇರಿ ಮತ್ತು ಲೋಖಂಡವಾಲಾ ಪ್ರದೇಶಗಳಲ್ಲಿ ನಿನ್ನೆ ಸರ್ಚ್​​ ಕಾರ್ಯಾಚರಣೆ ಕೂಡ ನಡೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net