ನಾನಾವತಿ ಆಸ್ಪತ್ರೆಯಿಂದ ತಮ್ಮ ಚಿತ್ರ ಹಂಚಿಕೊಂಡ ಅಮಿತಾಭ್​ ಬಚ್ಚನ್​

amitabh bachchan
Published on

ನವದೆಹಲಿ: ಕೋವಿಡ್​-19 ಸೋಂಕಿಗೆ ತುತ್ತಾಗಿ ಶನಿವಾರ ತಡರಾತ್ರಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್​ ದಿಗ್ಗಜ, ಬಿಗ್​ಬಿ ಅಮಿತಾಭ್​ ಬಚ್ಚನ್​, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾನು ಶನಿವಾರ ಸಂಜೆ ಕೋವಿಡ್​-19 ಸೋಂಕಿಗೆ ತುತ್ತಾಗಿರುವುದು ಖಚಿತಪಟ್ಟಿತು... ಆಸ್ಪತ್ರೆಗೆ ದಾಖಲಾಗಿದ್ದೇನೆ... ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ... ಕುಟುಂಬದವರು ಮತ್ತು ಸಹಾಯಕ ಸಿಬ್ಬಂದಿ ಪರೀಕ್ಷೆಗೆ ಒಳಪಟ್ಟಿದ್ದು, ಫಲಿತಾಂಶ ನಿರೀಕ್ಷಿಸಲಾಗುತ್ತಿದೆ... ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳಿ ಎಂಬ ಸಂದೇಶದೊಂದಿಗೆ ಈ ಚಿತ್ರವನ್ನು ಬಿಗ್​ಬಿ ಹಂಚಿಕೊಂಡಿದ್ದಾರೆ.

ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅಮಿತಾಭ್​ ಬಚ್ಚನ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪುತ್ರ ಅಭಿಷೇಕ್​ ಬಚ್ಚನ್​ ಕೂಡ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬಿಗ್​ಬಿ ಪತ್ನಿ ಜಯಾ ಬಚ್ಚನ್​ ಹಾಗೂ ಅಭಿಷೇಕ್​ ಪತ್ನಿ ಐಶ್ವರ್ಯ ರೈ ಬಚ್ಚನ್​ ಹಾಗೂ ಪುತ್ರಿ ಆರಾಧ್ಯ ಅವರನ್ನು ಪರೀಕ್ಷಿಸಿದಾಗ ಅವರಿಗೆ ಸೋಂಕಿ ತಗುಲದೇ ಇರುವುದು ಖಚಿತಪಟ್ಟಿದೆ ಎಂದು ನಾನಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲಿ ಇರುವಾಗಲೇ ಅಮಿತಾಭ್​ ಬಚ್ಚನ್​ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಲಕ್ಷಣ ಸೌಮ್ಯವಾಗಿದ್ದರಿಂದ ಅವರು ತಮ್ಮ ಮನೆಯಲ್ಲೇ ಸ್ವಪ್ರೇರಣೆಯ ಕ್ವಾರಂಟೈನ್​ಗೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾದರು ಎನ್ನಲಾಗಿದೆ.

vijayavani.net/outrage-as-muslim-fanatics-dig-up-three-day-old-girls-body-from-cemetery/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net