ಶಿರಾಡಿ ಘಾಟ್ ಚತುಷ್ಪಥಕ್ಕೆ ಬಿಡ್ ಆಹ್ವಾನ

shirady-new 5
Published on

ಮಂಗಳೂರು: ಬಹುಜನರ ಬೇಡಿಕೆಯಂತೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ಭಾಗ ಕೊನೆಗೂ ಮೇಲ್ದರ್ಜೆಗೇರುತ್ತಿದೆ. ಮಾರನಹಳ್ಳಿ ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ವಣಕ್ಕೆ 1976 ಕೋಟಿ ರೂ. ಮೊತ್ತದ ಬಿಡ್ ಆಹ್ವಾನಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ದಕ್ಷಿಣ ಕನ್ನಡ ಸಂಸದರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಇರುವ 25 ಕಿ.ಮೀ. ದೂರದ ದ್ವಿಪಥ ರಸ್ತೆಯನ್ನು ಚತುಷ್ಪಥವನ್ನಾಗಿ ಮಾಡಲಾಗುತ್ತಿದ್ದು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಿಡ್ ಆಹ್ವಾನಿಸಿ ಪ್ರಕಟಣೆ ಹೊರಡಿಸಿದೆ. ಫೆಬ್ರವರಿ 1 ಬಿಡ್ ಸಲ್ಲಿಸಲು ಕೊನೆಯ ದಿನಾಂಕ. ಇಪಿಸಿ ಮಾದರಿಯಲ್ಲಿ 24 ತಿಂಗಳ ಒಳಗೆ ಕಾಮಗಾರಿ ಮುಗಿಸುವ ಷರತ್ತು ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net