ಸ್ಕೂಟರ್ರಾ...ಸೈಕಲಾ...?!: ಎಂಟ್ನೇ ಕ್ಲಾಸ್ ಹುಡುಗನ ಕ್ರಿಯೇಟಿವಿಟಿಗೊಂದು ಸಲಾಂ..

915444
Published on

ಲುಧಿಯಾನ: ಪಂಜಾಬ್​ನ ಲುಧಿಯಾನದ ಎಂಟನೇ ಕ್ಲಾಸ್​ನ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ನೆರವಿನೊಂದಿಗೆ ವಿಶಿಷ್ಟವಾದ ಸ್ಕೂಟರ್ ಸೈಕಲ್​ ಅನ್ನು ಸಿದ್ಧಪಡಿಸಿದ್ದಾನೆ. ಆ ಸ್ಕೂಟರ್​ ಸೈಕಲ್​ ಈಗ ಅಲ್ಲಿನ ಜನರ ಗಮನಸೆಳೆಯುತ್ತಿದ್ದು, ಸುದ್ದಿಯ ಕೇಂದ್ರ ಬಿಂದುವಾಗಿದೆ.

ವಿದ್ಯಾರ್ಥಿಯ ಹೆಸರು ಹರ್ಮನ್​ಜೋತ್ ಸಿಂಗ್​. ಈತ ಸಿದ್ಧಪಡಿಸಿರುವ ಸ್ಕೂಟರ್ ಸೈಕಲ್ ಮುಂಭಾಗದಿಂದ ನೋಡಿದ್ರೆ ಸ್ಕೂಟರ್ ನಂತೆ ಗೋಚರಿಸುತ್ತದೆ. ಹಿಂಬದಿಯಿಂದ ನೋಡಿದ್ರೆ ಸೈಕಲ್ ರೀತಿಯೂ ಕಾಣುತ್ತಿದೆ. ಈ ಹೈಬ್ರಿಡ್​ ವಾಹನವೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕುರಿತು ಹರ್ಮನ್​ಜೋತ್ ಸಿಂಗ್ ಎಎನ್​ಐಗೆ ತಿಳಿಸಿದ್ದಿಷ್ಟು- ಕೋವಿಡ್​-19 ಕಾರಣಕ್ಕೆ ನನಗೆ ಹೊಸ ಸೈಕಲ್ ತೆಗೆಸಿಕೊಡುವುದು ಅಪ್ಪನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಇದನ್ನು ಮಾಡಿದ್ವಿ. ಇದರ ವೆಚ್ಚ 10,000 ರೂಪಾಯಿ ಆಗಬಹುದು. ಹದಿನೈದು ದಿವಸ ಬೇಕಾಯ್ತು ಇದನ್ನು ಸಿದ್ಧಪಡಿಸೋದಕ್ಕೆ. ಗ್ರಾಮದಲ್ಲಿ ಇದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net