

ಕೋಲಾರ: ತಾಲೂಕಿನ ಹೊಳಲಿ ಸಮೀಪ ಕರ್ನಾಟಕ ಕ್ರಿಕೇಟ್ ಅಸೋಸಿಯೇಷನ್ ವತಿಯಿಂದ ಕ್ರಿಕೇಟ್ ಸ್ಟೇಡಿಯಂ ನಿರ್ಮಾಣಕ್ಕಾಗಿ ಭೂಮಿಪೂಜಾ ಕಾರ್ಯಕ್ರಮವನ್ನು ಅ.23ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಅಸೋಷಿಯೇಷನ್ ಸಂಚಾಲಕ ಆಯಿಲ್ ರಮೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೇಟ್ ಸ್ಟೇಡಿಯಂ ನಿರ್ಮಾಣ ಮಾಡಬೇಕು ಎಂಬ ಕನಸು ನನಸಾಗಿದ್ದು, ಇದಕ್ಕೆ ಪೂರಕ ಕಾರ್ಯ ಚಟುವಟಿಕೆಗಳು ಆರಂಭವಾಗಿವೆ ಎಂದು ತಿಳಿಸಿದರು.
ಬಹುತೇಕ ಮಂದಿ ಆಟಗಾರರು ರಾಜ್ಯ, ದೇಶ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರತಿನಿಽಸಿ ಕೀರ್ತಿ ಹೆಚ್ಚಿಸಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಇಲ್ಲೇ ರಣಜಿ ಟ್ರೋಫಿಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಮಂಗಳೂರು, ಉಡುಪಿ, ಪುತ್ತೂರು, ಚಿಕ್ಕಮಗಳೂರು ಸೇರಿ 8 ಜಿಲ್ಲೆಗಳಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲು ಅಂತಿಮ ಪ್ರಯತ್ನ ನಡೆಸಿದೆ. ಜತೆಗೆ ಕೋಲಾರದಲ್ಲೂ ಅಸೋಸಿಯೇಷನ್‌ನಿಂದ ನಿರ್ಮಾಣ ಮಾಡಲು ಬ್ರಿಜೆಷ್ ಪಟೇಲ್ ಅವರು ಸೂಚಿಸಿದ ಕಾರಣ ಆಸಕ್ತಿ ತೆಗೆದುಕೊಳ್ಳಲಾಗಿದೆ ಎಂದರು.
ಜಿಲ್ಲಾಡಳಿದಿAದ 16 ಎಕರೆ ಜಮೀನು ಮಂಜೂಡು ಮಾಡಿದ್ದು, ಇನ್ನು ಹೆಚ್ಚುವರಿಯಾಗಿ 12 ಎಕರೆ ಜಾಗ ನೀಡಲು ಮನವಿ ಮಾಡಿದ್ದೇವೆ. 4 ಗ್ರೌಂಡ್‌ಗಳನ್ನು ವಿಭಜಿಸಲಾಗುವುದು ಸೀಟ್ ಮ್ಯಾಟ್‌ನಲ್ಲಿ ಲೇದರ್ ಬಾಲ್‌ನ ತರಬೇತಿಯನ್ನು 14 ವರ್ಷ,16 ,18 ಹಾಗೂ 20 ವರ್ಷದ ಯುವಕರಿಗೆ ಹಾಗೂ ಯುವತಿಯರಿಗೆ ಉಚಿತ ತರಬೇತಿ ಶಿಬಿರ ನಡೆಸಲಾಗುವುದು ಎಂದರು.
ಜಿಲ್ಲಾ ಯುವ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರವು ಕ್ರಿಕೆಟ್ ಕ್ರೀಡೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿತ್ತು. ಈ ಹಿಂದೆ ಸಂಪತ್‌ಕುಮಾರ್, ರಾಮಪ್ರಸಾದ್, ಪ್ರಭಾಕರ್ ಮುಂತಾದವರು ಪ್ರಾರಂಭದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಯುವಕರಿಗೆ ಪರಿಚಿಸಿದರು. ಇದಕ್ಕೆ ಜಿಲ್ಲಾಡಳಿತ, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸೇರಿ ಎಲ್ಲರ ಸಹಕಾರ ಸಿಕ್ಕಿದೆ ಎಂದರು.
ಕ್ರೀಡಾಪಟುಗಳಾದ ಮಂಜುನಾಥ್, ಅಡಿಗ ರಘು, ಕಿಟ್ಟಿ, ಪುಟ್ಟಸ್ವಾಮಿ, ಚಂದ್ರಶೇಖರ್, ಉಲ್ಲಾಸ್ ಸನ್ನಿರಾಜ್, ಪ್ರಭಾಕರ್, ಶಿವು, ಮಂಜುನಾಥ್ ಇದ್ದರು.