

ಅರಸೀಕೆರೆ ಗ್ರಾಮಾಂತರ: ಬಾಣಾವರ ಹೋಬಳಿ ವ್ಯಾಪ್ತಿಯ ಚಿಕ್ಕೂರು ಗ್ರಾಮದಿಂದ ಹಿರಿಯೂರು ಗ್ರಾಮದವರೆಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಶುಕ್ರವಾರ ಚಿಕ್ಕೂರು ಗ್ರಾಮದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ರಸ್ತೆಯನ್ನು ಅನೇಕ ಬಾರಿ ಅಭಿವೃದ್ಧಿ ಪಡಿಸಿದ್ದರೂ ಕೂಡ ಕೆರೆ ಪಕ್ಕದಲ್ಲಿರುವುದರಿಂದ ಪದೆ ಪದೇ ಹಾಳಾಗುತ್ತಿದೆ. ಆದ್ದರಿಂದ ಸಿ.ಸಿ.ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿ 1 ಕೋಟಿ ರೂ. ಅನುದಾನ ತರಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ, ಬೆಂಡೆಕೆರೆ ಗ್ರಾ.ಪಂ ಅಧ್ಯಕ್ಷೆ ಗೀತಾಕುಮಾರಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಕುಬೇರ ,ಸದಸ್ಯೆ ಭಾವನಾ, ಮುಖಂಡರಾದ ಪ್ರಭುದೇವ, ಶೇಖರ್, ಮಂಜಣ್ಣ, ಪರಮೇಶ್, ಗಂಗಾಧರ, ಗುರುಮೂರ್ತಿ, ರೇಣುಕಣ್ಣ, ಚಂದ್ರೇಗೌಡ, ಮಧು, ಎಇಇ ಬಾಲಾಜಿ , ಇಂಜಿನಿಯರ್ ಅಶ್ವಿನಿ ಹಾಗೂ ಗ್ರಾಮಸ್ಥರು ಹಾಜರಿದ್ದರು.