

Purva parwani: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ನಾಯಕತ್ವದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಭೋಪಾಲ್ ಮೂಲದ ವಿದ್ಯಾರ್ಥಿನಿ ಪೂರ್ವಾ ಪರ್ವಾನಿ, ತನ್ನ ಕುಟುಂಬದೊಂದಿಗೆ ಸಂಭ್ರಮಾಚರಣೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ಪೂರ್ವಾ ಪರ್ವಾನಿ ಎಂಬ ಯುವತಿ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ, ನನ್ನ ಕುಟುಂಬದ ಸದಸ್ಯರಿಲ್ಲದೆ ನಾನು ಇದನ್ನು ಮಾಡಲು ಸಾಧ್ಯವಿರಲಿಲ್ಲ ಎಂಬ ಶೀರ್ಷಿಕೆಯ ನೀಡಿದ್ದಾರೆ. ಸದ್ಯ ಈ ವಿಡಿಯೊ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ವಿಡಿಯೋ ಕ್ಲಿಪ್‌ನಲ್ಲಿ, ಪರ್ವಾನಿ ತಾಳ್ಮೆಯಿಂದ ಫಲಿತಾಂಶಕ್ಕಾಗಿ ತನ್ನ ಲ್ಯಾಪ್‌ಟಾಪ್ ಅನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು, ಆಕೆಯ ಪೋಷಕರು ಪಕ್ಕದಲ್ಲಿ ಆತಂಕದಿಂದ ಕಾಯುತ್ತಿದ್ದಾರೆ. ಫಲಿತಾಂಶಗಳು ಕಾಣಿಸಿಕೊಂಡ ತಕ್ಷಣ, ಯುವತಿ ಸಂತೋಷದಿಂದ ಸಂಭ್ರಮಿಸುತ್ತಾರೆ, ಆಕೆಯ ಪೋಷಕರು ಅವಳನ್ನು ಅಭಿನಂಧಿಸುತ್ತಾರೆ.
ಆಕೆಯ ತಾಯಿ ಭಾವುಕರಾಗಿ ಯುವತಿಯನ್ನು ಬಿಗಿಯಾಗಿ ಅಪ್ಪಿಕೊಂಡಂತೆ ಕಾಣುತ್ತಾರೆ, ನಂತರ ಪೂರ್ವ ಈ ವಿಷಯವನ್ನು ತನ್ನ ಭಾವಿ ಪತಿ ಎನ್ನಲಾದ ವ್ಯಕ್ತಿಗೆ ಹಂಚಿಕೊಳ್ಳಯತ್ತಾರೆ. ಆ ವ್ಯಕ್ತಿ ಕುರ್ಚಿಯಿಂದ ಜಿಗಿದು ಸಂಭ್ರಮದಲ್ಲಿ ನೃತ್ಯ ಮಾಡುವುದು ವೈರಲ್ ವಿಡಿಯೋಗೆ ಮೆರುಗು ನೀಡುತ್ತಿದೆ.
ಈ ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ಅನೇಕರಿಗೆ ಇಷ್ಟವಾಗಿದ್ದು, ಯುವತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.(ಏಜೆನ್ಸೀಸ್)