ಗಣೇಶ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ

15 BIRUR 02
ಬೀರೂರಲ್ಲಿ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್ ನಿರ್ಮಾಣಕ್ಕೆ ಪುರಸಭೆ ಮತ್ತು ಮಿತ್ರ ಸಮಾಜದಿಂದ ಭೂಮಿ ಪೂಜೆ ನೆರವೇರಿಸಲಾಯಿತು. ಎಂ.ಪಿ.ಸುದರ್ಶನ್, ಮೀನಾಕ್ಷಮ್ಮ ಇದ್ದರು.
Published on

ಬೀರೂರು: ಬೀರೂರಿನ ಕಿತ್ತೂರು ರಾಣಿ ಕ್ರೀಡಾಂಗಣದ ನಂಜುಂಡಸ್ವಾಮಿ ರಂಗಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಪುರಸಭೆ ಮತ್ತು ಮಿತ್ರ ಸಮಾಜದ ಸಹಯೋಗದಲ್ಲಿ ಸತ್ಯಗಣಪತಿ ಪ್ರತಿಷ್ಠಾಪನೆ ಸಲುವಾಗಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಸೆ.18ರಂದು ಆರಂಭವಾಗುವ ಗಣೇಶೋತ್ಸವ ಆ.24 ರವರೆಗೆ ನಡೆಯಲಿದೆ. ವಿಜಯದಶಮಿ ರಾತ್ರಿ ಅದ್ದೂರಿ ಸಿಡಿಮದ್ದಿನ ಪ್ರದರ್ಶನದೊಂದಿಗೆ ವಿಸರ್ಜನೆ ನಡೆಯಲಿದೆ. ಪ್ರತಿದಿನ ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮ, ಗೀತಾ ಗಾಯನ, ನತ್ಯ, ರಸಮಂಜರಿ ಸೇರಿದಂತೆ ಮೊದಲಾದ ಕಾರ್ಯಕ್ರಮಗಳು ನೆರವೇರಲಿವೆ. ಗಣಪತಿ ಹೋಮ, ಜೈನ್ ಸಮಾಜದ ವತಿಯಿಂದ ಅನ್ನಸಂತರ್ಪಣೆ, ಮೊದಲಾದ ಕಾರ್ಯಕ್ರಮಗಳು ಮತ್ತು ಪ್ರತಿ ದಿನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಪೂಜೆ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಮಾಜಿ ಉಪಾಧ್ಯಕ್ಷೆ ಮೀನಾಕ್ಷಮ್ಮ, ಮುಖ್ಯಾಧಿಕಾರಿ ಶಾಂತಲಾ, ಸದಸ್ಯರಾದ ಬಿ.ಕೆ.ಶಶಿಧರ್, ಲಕ್ಷ್ಮಣ್, ಬಿ.ಆರ್.ಮೋಹನ್‌ಕುಮಾರ್, ಮಾನಿಕ್‌ಬಾಷಾ, ಲೋಕೇಶಪ್ಪ, ಎನ್.ಎಂ.ನಾಗರಾಜ್ ಮತ್ತು ಮುಖಂಡರಾದ ಬಾವಿಮನೆ ಮಧು, ಬಿ.ಎಂ.ರುದ್ರಪ್ಪ, ಸಂತೋಷ್ ಕುಮಾರ್, ವಿನಾಯಕ, ಪುನೀತ್, ಯತೀಶ್, ರವಿಕುಮಾರ್, ಮಲ್ಲಿಕಾರ್ಜುನ್, ಕುಮಾರ ಶಾಸಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net