ಹೋಟೆಲ್​ನಲ್ಲಿ ಖ್ಯಾತ ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ ಶವವಾಗಿ ಪತ್ತೆ

Akanksha Dubey
Published on

ಲಖನೌ: ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ (25) ಅವರು ಉತ್ತರ ಪ್ರದೇಶದ ವಾರಾಣಸಿಯ ಸರ್ನಾಥ್​ ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ.

ಸಿನಿಮಾ ಮಾತ್ರವಲ್ಲದೆ ಆಕಾಂಕ್ಷಾ ಸಾಮಾಜಿಕ ಜಾಲತಾಣದಲ್ಲೂ ಪ್ರಖ್ಯಾತಿ ಹೊಂದಿದ್ದರು. ಡಾನ್ಸ್​ ರೀಲ್ಸ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡುತ್ತಿದ್ದರು. ಸಾಯುವ ಕೆಲ ಗಂಟೆಗಳಿಗೂ ಮುನ್ನ ಆಕಾಂಕ್ಷಾ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಭೋಜ್​ಪುರಿ ಹಾಡೊಂದಕ್ಕೆ ಡಾನ್ಸ್​ ಮಾಡಿದ್ದಾರೆ.

ಪ್ರೇಮಿಗಳ ದಿನದಂದು ಸಹ ನಟ ಸಮರ್​ ಸಿಂಗ್​​ ಜತೆಗಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು, ಪ್ರೇಮಿಗಳ ದಿನದ ಶುಭಾಶಯ ಎಂದು ಬರೆದು ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ದರು.

ಸ್ಥಳೀಯ ಮಾಧ್ಯಮಗಳ ಪ್ರಕಾರ ಆಕಾಂಕ್ಷಾ 2018ರಿಂದ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಸಿನಿಮಾಗಳಿಂದ ಬಿಡುವು ಪಡೆದುಕೊಂಡಿದ್ದರು. ಕೆಲ ವರ್ಷಗಳ ಮತ್ತೆ ಸಿನಿಮಾಗೆ ಮರಳಿದ್ದರು ಮತ್ತು ಸಂಕಷ್ಟದ ಸಮಯದಲ್ಲಿ ನನ್ನ ಜತೆ ನಿಂತಿದ್ದು, ನನ್ನ ತಾಯಿ ಎಂದು ಸದಾ ಹೇಳುತ್ತಿದ್ದರು.

ಆಕಾಂಕ್ಷಾ ಭೋಜ್​ಪುರಿ ಸಿನಿಮಾ ಇಂಡಸ್ಟ್ರಿಯಲ್ಲೂ ತುಂಬಾ ಖ್ಯಾತಿ ಪಡೆದಿದ್ದಾರೆ. 17ನೇ ವಯಸ್ಸಿನಲ್ಲಿ ಮೇರಿ ಜುಂಗ್​ ಮೇರಾ ಫೈಸ್ಲಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಮುಜ್ಸೆ ಶಾದಿ ಕರೋಗಿ (ಭೋಜ್‌ಪುರಿ), ವೀರೋನ್ ಕೆ ವೀರ್, ಫೈಟರ್ ಕಿಂಗ್, ಕಸಮ್ ಪೈಡಾ ಕರ್ನೆ KI 2 ಮತ್ತು ಇತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net