

ಶಿವಮೊಗ್ಗ: ರಾಮಣ್ಣ ಶ್ರೇಷ್ಠಿ ಪಾರ್ಕ್ ದೇವಸ್ಥಾನದ ಎದುರಿನ ಹೊಸ ಕಟ್ಟಡದಲ್ಲಿ ಜ.31ರಂದು ಬೆಳಗ್ಗೆ 11ಕ್ಕೆ ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಕೇಂದ್ರ ಕಚೇರಿ ಆರಂಭಗೊಳ್ಳಲಿದೆ ಎಂದು ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಟಿ.ವಿ.ಗಜೇಂದ್ರನಾಥ್ ಹೇಳಿದರು.
ಐದು ಸಾವಿರಕ್ಕೂ ಅಧಿಕ ಷೇರುದಾರರನ್ನು ಒಳಗೊಂಡಿದ್ದು, ಈವರೆಗೆ ಗಾಂಧಿಬಜಾರ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿತ್ತು. ಇದೀಗ ರಾಮಣ್ಣ ಶ್ರೇಷ್ಠಿ ಪಾರ್ಕ್ ದೇವಸ್ಥಾನದ ಎದುರಿನಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ ಅಧ್ಯಕ್ಷತೆ ವಹಿಸುವರು. ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮತ್ತಿತರರು ಭಾಗವಹಿಸುವರು ಎಂದರು.
ಲಕ್ಷ್ಮೀಕಾಂತ್, ವಿನಯ್ ತಾಂದ್ಲೆ, ವೇದಾವತಿ, ಸಾತ್ವಿಕ್, ನಿಖಿಲ್, ಗಿರೀಶ್, ವೆಂಕಟೇಶ್, ಎಂ.ಕೆ.ಸತ್ಯನಾರಾಯಣ್, ನವೀನ್, ವಿನಯ್ ತೇಲ್ಕರ್, ಗೀತಾ, ವಾಣಿ, ಕಲ್ಯಾಣಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.