ಪುತ್ರ ಪ್ರಜ್ವಲ್​ರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದ ಭವಾನಿ ರೇವಣ್ಣ

pr
Published on

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 8ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಸದ್ಯ ಜೈಲಿನಲ್ಲಿರುವ ಪುತ್ರ ಪ್ರಜ್ವಲ್ ಅವರನ್ನು ತಾಯಿ ಭವಾನಿ ರೇವಣ್ಣ ಭೇಟಿಯಾಗಿದ್ದಾರೆ.

ಪರಪ್ಪನ ಅಗ್ರಹಾರದತ್ತ ಬಂದ ಭವಾನಿ ರೇವಣ್ಣ ಅವರು ಕ್ಯಾಮೆರಾ ಕಾಣುತ್ತಿದ್ದಂತೆಯೇ ಕೈಯಿಂದ ಮುಖ ಮುಚ್ಚಿಕೊಂಡಿದ್ದಾರೆ. ಕಾರ್ ಡ್ರೈವರ್ ಮತ್ತು ಆಪ್ತ ಸಹಾಯಕನ ಜೊತೆಗೆ ಆಗಮಿಸಿದ್ದಾರೆ.

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಪಡೆದಿರೋ ಭವಾನಿ ರೇವಣ್ಣ ಇದೀಗ ಜೈಲಿಗೆ ಬಂದಿದ್ದ ತಮ್ಮ ಪುತ್ರರನ್ನು ಭೇಟಿಯಾಗಿ ಮಾತನಾಡಿಸಿಕೊಂಡು ಬಂದಿದ್ದಾರೆ.

ಶಾಸಕ ಎಚ್‌.ಡಿ ರೇವಣ್ಣ ಸಂಪೂರ್ಣ ಕುಟುಂಬ ಕಾನೂನು ಸಂಕಷ್ಟ ಎದುರಿಸುತ್ತಿದೆ. ಇಬ್ಬರೂ ಪುತ್ರರೂ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸಿಐಡಿ ಕಸ್ಟಡಿ ಹಾಗೂ ಜೈಲು ಸೇರಿದ್ದಾರೆ. ಖುದ್ದು ಎಚ್‌.ಡಿ ರೇವಣ್ಣ ಜೈಲಿಗೆ ಹೋಗಿ ಬಂದಿದ್ದರೆ, ಭವಾನಿ ಕೂಡ ಜಾಮೀನು ಪಡೆದಿದ್ದಾರೆ. ಈ ಎಲ್ಲಾ ಘಟನೆಗಳಿಂದ ಮುಜುಗರಕ್ಕೆ ಒಳಗಾಗಿರೋ ಭವಾನಿ ರೇವಣ್ಣ ಜೈಲಿಗೆ ಬರುವ ವೇಳೆ ಮಾಧ್ಯಮಗಳಿಗೆ ಮುಖ ಕಾಣಿಸದಂತೆ ಮುಖ ಮುಚ್ಚಿಕೊಂಡು ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net