ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಶಂಕಿತ ಯುವಕ, ಯುವತಿ ಜತೆ ಹೋಗಿದ್ದಾನೆಯೇ?

carona logo
Published on

ಉತ್ತರ ಕನ್ನಡ: ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಶಂಕಿತ ರೋಗಿ ನಾಪತ್ತೆಯಾಗಿದ್ದಾನೆ. ಆಸ್ಪತ್ರೆಯಿಂದ ಯುವಕ ನಾಪತ್ತೆಯಾಗಿರುವುದು ಆರೋಗ್ಯ ಇಲಾಖೆ ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಮಾ.27ರಂದು ಯುವಕ ಆಸ್ಪತ್ರೆಗೆ ದಾಖಲಾಗಿದ್ದ. ಈತನನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಲಾಗಿತ್ತು. ಭಾನುವಾರ ರಾತ್ರಿ ಮಾಸ್ಕ್​ ಧರಿಸಿ ಬಂದ ಯುವತಿಯೊಂದಿಗೆ ಆಸ್ಪತ್ರೆಯಿಂದ ಹೊರಹೋಗಿದ್ದಾನೆ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಯುವಕ ಬಗ್ಗೆ ಎಲ್ಲ ಕಡೆ ಮಾಹಿತಿ ನೀಡಲಾಗಿದ್ದು ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಯುವಕನ ಕೈಗೆ ಕ್ವಾರಂಟೈನ್​ ಮುದ್ರೆ ಹಾಕಲಾಗಿದ್ದು ಶೋಧ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net