18ರಂದು ಭಾರತಿ ಕೋ-ಆಪರೇಟಿವ್ ಸೊಸೈಟಿ ಸಭೆ

16 smg 4
Published on

ಶಿವಮೊಗ್ಗ: ಭಾರತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 29ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸೆ.18ರಂದು ಬೆಳಗ್ಗೆ 10.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಎನ್.ಏಳುಮಲೈ ತಿಳಿಸಿದರು.

1994ರಲ್ಲಿ 1,625 ಸದಸ್ಯರಿಂದ ಆರಂಭಗೊಂಡ ಸೊಸೈಟಿಯು ಇಂದು 4,500 ಸದಸ್ಯರನ್ನು ಒಳಗೊಂಡಿದೆ. ಹಾಲಿ 1.30 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು ಸಂಘವು 19.86 ಲಕ್ಷ ರೂ. ಲಾಭದಲ್ಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸಕ್ತ ವರ್ಷ 20.98 ಕೋಟಿ ರೂ. ವಹಿವಾಟು ನಡೆಸಿದ್ದು 9.50 ರೂ. ಡಿವಿಡೆಂಡ್ ನೀಡಲು ಸೊಸೈಟಿ ನಿರ್ಧರಿಸಿದೆ. ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 25 ಸಾವಿರ ತಮಿಳು ಜನಾಂಗವಿದೆ. 2015ರಲ್ಲಿ ಸೊಸೈಟಿಯು ಸ್ವಂತದೊಂದು ಕಟ್ಟಡ ಖರೀದಿಸಿ 2021ರಲ್ಲಿ ಸೊಸೈಟಿಯ ರಜತ ಮಹೋತ್ಸವ ಆಚರಿಸಲಾಗಿದೆ. ಜಾಮೀನು, ಸ್ಥಿರಾಸ್ತಿ, ಆಭರಣ ಮತ್ತು ವಾಹನ ಸಾಲ ನೀಡಲಾಗುತ್ತಿದೆ. ಷೇರುದಾರರು ಮೃತಪಟ್ಟರೆ ಅವರ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಉಪಾಧ್ಯಕ್ಷ ಪರಮೇಶ್, ನಿರ್ದೇಶಕರಾದ ಸಿ.ಗಂಗಾಪಾಣಿ, ಜೆ.ರಾಜೇಂದ್ರ, ಪಿ.ವೆಂಕಟೇಶ್, ಇ.ಶಿವಕುಮಾರ್, ಲೋಕೇಶ್, ಶಂಕರ್, ಮುರುಳಿ, ಧನಲಕ್ಷ್ಮೀ, ಕಾರ್ಯದರ್ಶಿ ಆರ್.ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net