

* ಕಿರುವಾರ ಎಸ್.ಸುದರ್ಶನ್ ಕೋಲಾರ
ರಾಜ್ಯದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಯಾಗಿ 18 ವರ್ಷ ಪೂರೈಸಿದೆ. ಯೋಜನೆಯಡಿ ನೋಂದಣಿಯಾಗಿರುವ ಲಾನುಭವಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆ ಇದಾಗಿದ್ದು, 2006&2007ರಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿದೆ. ಆಗ ಸಮಾಜದಲ್ಲಿ ಲಿಂಗಾನುಪಾತ ಸರಿದೂಗಿಸಲು, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯವಿವಾಹ ಪದ್ಧತಿ ತಡೆಯಲು ಮತ್ತು ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯಮಟ್ಟ ಉತ್ತಮಪಡಿಸಿ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಿಗೊಳಿಸಿದ್ದ ಯೋಜನೆ ಫಲ ಕೊಡುವ ಕಾಲ ಸಮೀಪಿಸಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಹೆಣ್ಣು ಮಗುವಿನ ಸ್ಥಾನಮಾನ ಜತೆಗೆ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳನ್ನು ಮೇಲೆತ್ತುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ, 2006ರ ಮಾ.31ರಿಂದ 2008ರ ಜುಲೈ 31ರ ವರೆಗೆ ಜನಿಸಿದ ಹೆಣ್ಣು ಮಕ್ಕಳಿಗೆ 10 ಸಾವಿರ ರೂ. ಹಾಗೂ 2008ರ ನಂತರ ಜನಿಸಿದ ಮೊದಲ ಮತ್ತು 2ನೇ ಹೆಣ್ಣು ಮಗುವಿಗೆ 19,300 ರೂ. ಲಾನುಭವಿ ಹೆಸರಿನಲ್ಲಿ ಠೇವಣಿ ಇಡಲಾಗಿದೆ. 18 ವರ್ಷ ಪೂರ್ಣಗೊಂಡಿರುವ ಲಾನುಭವಿ ಹೆಸರಿಗೆ ಜಮಾ ಮಾಡಲು ಕ್ರಮವಹಿಸಬೇಕಾಗುತ್ತದೆ.
18 ವರ್ಷ ಕಳೆದರೂ ಫಲಾನುಭವಿಗಳ ಖಾತೆಗೆ ಮಾತ್ರ 1 ಲಕ್ಷ ರೂ. ಜಮೆಯಾಗಿಲ್ಲ. ಹೀಗಾಗಿ 18 ವರ್ಷ ತುಂಬಿದ ಯುವತಿಯರಿಗೆ ಉನ್ನತ ವ್ಯಾಸಂಗ ಸೇರಿ ಇತರ ಕಾರ್ಯಗಳಿಗೆ ಅಡೆ-ತಡೆ ಉಂಟಾಗುತ್ತಿದೆ. ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ನಿಯಮಗಳನ್ನು ಕಠಿಣಗೊಳಿಸಿದ್ದು, ಮೆಚ್ಯುರಿಟಿ ಹಣ ಹೇಗೆ ಪಡೆದುಕೊಳ್ಳುವುದು ಎಂಬ ಆತಂಕ ಪಾಲಕರಲ್ಲಿ ಮೂಡಿದೆ.
ಜಿಲ್ಲೆಯಲ್ಲಿ 5,256 ಫಲಾನುಭವಿಗಳಾಗಿದ್ದಾರೆ. ಯಾರ ಖಾತೆಗೂ ಹಣ ಜಮೆಯಾಗಿಲ್ಲ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು, ಮೇಲ್ವಿಚಾರಕಿಯರು ಫಲಾನುಭವಿಗಳ ಬಿಪಿಎಲ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಫಲಾನುಭವಿ ಬಾಂಡ್ ಸಂಗ್ರಹಿಸಲು ತಡವಾಗಿರುವುದರಿಂದ ಹಣ ಜಮೆ ತಡವಾಗುತ್ತಿದೆ ಎನ್ನಲಾಗಿದೆ.
* ಎಲ್ಐಸಿ ಮೂಲಕ ಹಣ ಜಮೆ
ಎಲ್ಐಸಿ ಮೂಲಕ ಫಲಾನುಭವಿಗಳು ಹಣ ಪಡೆಯಬೇಕಿದೆ. ಆದರೆ, ಇಲ್ಲಿವರೆಗೆ ಎಲ್ಐಸಿ ಕಚೇರಿಗೆ ಶಿಶು ಅಭಿವೃದ್ಧಿ ಇಲಾಖೆಯಿಂದ ಫಲಾನುಭವಿಗಳ ಬಾಂಡ್ ಬಗ್ಗೆ ಯಾವುದೇ ವರದಿ ಹೋಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಆದೇಶ ಬಂದ ಮೇಲೆ ದಾಖಲೆ ಸಂಗ್ರಹಿಸಿ ಎಲ್ಐಸಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕಾರಣದಿಂದ ಖಾತೆಗೆ ಹಣ ಜಮೆ ಆಗುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ.
* ಅರ್ಹತೆಗಳೇನು..?
ತಂದೆ-ತಾಯಿ ಮಗುವಿನ ವಿದ್ಯಾಭ್ಯಾಸ ಮುಂದುವರಿಸಿರುವುದನ್ನು ಖಚಿತ ಪಡಿಸಬೇಕು, ಲಾನುಭವಿಯ ಕುಟುಂಬವು ಬಿಪಿಎಲ್ ಕಾರ್ಡ್ ಹೊಂದಿರಬೇಕು. ವಾರ್ಷಿಕ ಆದಾಯದ ಮಿತಿ 2.50 ಲಕ್ಷ ರೂ. ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮೀರಿರಬಾರದು. ಅಂಗನವಾಡಿ ಕೇಂದ್ರದಲ್ಲಿ ನೋಂದಣಿಯಾಗಿರಬೇಕು. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅಂಗನವಾಡಿ ಕಾರ್ಯತೆಯರು ಮೇಲ್ವಿಚಾರಕಿಗೆ ತಲುಪಿಸಬೇಕು. ಆಗ ಅರ್ಜಿಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ನೋಂದಣಿ ಮಾಡಿ ಬಾಂಡ್ ಐಡಿಯನ್ನು ಲಾನುಭವಿಗೆ ನೀಡಿರುತ್ತಾರೆ. ಲಾನುಭವಿಯು ಬಾಲ್ಯ ವಿವಾಹ ಆಗಿರಬಾರದು, 8ನೇ ತರಗತಿ ಉತ್ತೀರ್ಣ
ಕೋಟ್...
ಭಾಗ್ಯಲಕ್ಷ್ಮಿ ಯೋಜನೆಯ ಲಾನುಭವಿಗಳ ದಾಖಲೆಗಳನ್ನು ಸಂಗ್ರಹಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ಲಾನುಭವಿಗಳಿಗೆ ಪ್ರಯೋಜನ ತಲುಪಿಸಲು ಕ್ರಮವಹಿಸಲಾಗುವುದು.
- ನಾರಾಯಣಸ್ವಾಮಿ, ಉಪ ನಿರ್ದೇಶಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆ
ಕೋಟ್...
ಮಗಳಿಗೆ 18 ವರ್ಷ ಪೂರ್ಣಗೊಂಡ ನಂತರ ಬಾಂಡ್ ಮೆಚ್ಯೂರಿಟಿ ಹಣ ಬರುತ್ತದೆ ಎಂಬ ನಿರೀೆಯಿತ್ತು. ಸರ್ಕಾರ ಯೋಜನೆಯ ಕಡೆ ಗಮನಹರಿಸಿ ಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕು.
- ವಿಶ್ವನಾಥ್ಗೌಡ, ಯಲವಾರ
ಪಟ್ಟಿ...
ತಾಲೂಕು ಲಾನುಭವಿಗಳ ಸಂಖ್ಯೆ
ಬಂಗಾರಪೇಟೆ 386'
ಕೋಲಾರ 1,394
ಮಾಲೂರು 997
ಮುಳಬಾಗಿಲು 1,299
ಶ್ರೀನಿವಾಸಪುರ 830
ಬೇತಮಂಗಲ 350
ಒಟ್ಟು 5,256