

ಅರಕಲಗೂಡು: ಪಟ್ಟಣದ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿಗಳು ಮಲ್ಲಿಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ ವಾಲಿಬಾಲ್, ಖೋ ಖೋ, ಥ್ರೋ ಬಾಲ್, ಶಟಲ್ ಬ್ಯಾಡ್ಮಿಂಟನ್, 100 ಮೀ ಓಟ, 200 ಮೀ. ಓಟ, 400 ಮೀ. ಓಟ, 1500 ಮೀ. ಓಟ, 3000 ಮೀ. ಓಟ, 400 ಮೀ. ರಿಲೇ, ತ್ರಿವಿಧ ಜಿಗಿತ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್‌ಪಟ್ ಪ್ರಥಮ ಹಾಗೂ ಟೆನಿಕಾಯ್ಟ, 100 ಮೀ, 200 ಮೀ, 400 ಮೀ, 800 ಮೀ, 3000 ಓಟ, 400 ಮೀ. ರಿಲೇ, ಶಾರ್ಟ್ ಪುಟ್, ತ್ರಿವಿಧ ಜಿಗಿತ, ಎತ್ತರ ಜಿಗಿತ, ಡಿಸ್ಕ್‌ಸ್ ಥ್ರೋನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ವಾಲಿಬಾಲ್, ಖೋ ಖೋ, ಥ್ರೋಬಾಲ್, ಶಟಲ್ ಬ್ಯಾಡಿಂ್ಮಟನ್, 100 ಮೀ. ಓಟ, 200 ಮೀ., 400 ಮೀ., 1500 ಮೀ. ಓಟ, 400 ಮೀ. ರಿಲೇ, ತ್ರಿವಿಧ ಜಿಗಿತ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್‌ಪಟ್ ಪ್ರಥಮ 100 ಮೀ. ಓಟ, 200 ಮೀ., 400 ಮೀ., 800 ಮೀ, 1500 ಮೀ. ಓಟ, 400 ಮೀ. ರಿಲೇ, ಶಾಟ್‌ಪಟ್, ತ್ರಿವಿಧ ಜಿಗಿತ, ಎತ್ತರ ಜಿಗಿತ, ಡಿಸ್ಕ ಸ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ, ಬಾಲಕರ ವಿಭಾಗದ ಸಮಗ್ರ ಪ್ರಶಸ್ತಿ ಮತ್ತು ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿ ಹಾಗೂ ಕಾಲೇಜು ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಪ್ರಾಂಶುಪಾಲ ಮಹೇಶ್ ಹೊಡೆನೂರು, ಆಡಳಿತ ಮಂಡಳಿ ಅಭಿನಂದಿಸಿದೆ.