ದ್ಯಾವರುಗಳ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರ ಭೇಟಿ

14 btm 3
ಅಂಕತಟ್ಟಹಳ್ಳಿಯಲ್ಲಿ ಶುಕ್ರವಾರ ದ್ಯಾವರುಗಳಿಗೆ ಮಹಿಳೆಯರು ಸಾಮೂಹಿಕವಾಗಿ ದೀಪದಾರತಿ ಸೇವೆ ಸಲ್ಲಿಸಿದರು.
Published on

ಬೇತಮಂಗಲ: ಬೇತಮಂಗಲ ಸಮೀಪದ ಅಂಕತಟ್ಟಹಳ್ಳಿಯಲ್ಲಿ ಏರ್ಪಡಿಸಿದ್ದ 10 ದಿನಗಳ ದ್ಯಾವರುಗಳ ಕಾರ್ಯಕ್ರಮದಲ್ಲಿ ಕೊನೆಯ ದಿನವಾದ ಶುಕ್ರವಾರದಂದು ವಿವಿಧ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.

20 ವರ್ಷಗಳಿಗೊಮ್ಮೆ ನಡೆಯುವ ದ್ಯಾವರುಗಳ ಸಂಭ್ರಮದಲ್ಲಿ ಪೂರ್ವಿಕರ ಪದ್ಧತಿಗಳನ್ನು ಆಚರಣೆ ಮಾಡಲಾಯಿತು. ತಣಿಗೆಶಾಸ, ಪಟಾಲಮ್ಮ, ಶಕ್ತಿ ದೇವರುಗಳಿಗೆ ದೀಪದ ಸೇವೆ, ಬಿಟ್ಟೇರಿ ಕರಗಗಳು, ಹೊಸ ದ್ಯಾವರ, ಬಡಿ ದ್ಯಾವರ ಪೂಜೆ ಕಾರ್ಯಕ್ರಮಗಳು ಸಂಪನ್ನಗೊಂಡವು.

ನಲ್ಲೂರು, ನತ್ತ, ಹುಲ್ಕೂರು, ಎಚ್.ಗೊಲ್ಲಹಳ್ಳಿಯ 141 ಕುಟುಂಬಗಳು 20 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುರಿಗಳು ಸೇರಿ ಕೋಳಿ, ಹಂದಿ ಮೀನು ಮಾಂಸಗಳ ಅಡುಗೆ ಮಾಡಲಾಗಿತ್ತು.

ಕೆಜಿಎ್ ಶಾಸಕಿ ಎಂ.ರೂಪಕಲಾ ಅವರು ಗ್ರಾಮದ ಮನೆಗಳಿಗೆ ತೆರಳಿ ಸಿಹಿ ತಿನಿಸು ಸ್ವೀಕರಿಸಿದರು. ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಎಂ.ನಾರಾಯಣಸ್ವಾಮಿ, ಎಂಎಲ್ಸಿ ಅನಿಲ್‌ಕುಮಾರ, ಕಾಂಗ್ರೆಸ್ ಮುಖಂಡರಾದ ನೀಲಕಂಠಗೌಡ, ರಾಜೇಂದ್ರಗೌಡ, ಬಿಜೆಪಿ ಮುಖಂಡರಾದ ಚಂದ್ರಾರೆಡ್ಡಿ, ಶ್ರೆನಿವಾಸ, ಮಹೇಶ್, ಬಜ್ಜಿನಾಯ್ಡು, ಮುನಿಸ್ವಾಮಿರೆಡ್ಡಿ ಸೇರಿ ಇತರ ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net