

ಮಡಿಕೇರಿ: ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆದ ಬ್ರೈನೋಬ್ರೈನ್ ಫೆಸ್ಟ್-೨೦೨೨, ೪೦ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಕೇವಲ ೩ ನಿಮಿ? ಸಮಯದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮೆರೆದು ೭ ಚಾಂಪಿಯನ್ ಟ್ರೋಫಿ, ೩ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ವಿವಿಧ ರಾಜ್ಯಗಳ ಬ್ರೈನೋಬ್ರೈನ್ ಕೇಂದ್ರಗಳಿಂದ ೪ ರಿಂದ ೧೪ ವ?ರ್ದ ಏಳು ಸಾವಿರಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ ಒಟ್ಟು ೧೦ ವಿದ್ಯಾರ್ಥಿಗಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯರವರ ನೇತೃತ್ವದಲ್ಲಿ ಸ್ಪರ್ಧಿಸಿದ್ದರು.
೧೦ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಲ್ಲದೆ ಮಡಿಕೇರಿ ತರಬೇತಿ ಕೇಂದ್ರವು ಬೆಸ್ಟ್ ಫ್ಯಾಕಲ್ಟಿ ಅವಾರ್ಡ್ ಹಾಗೂ ಬೆಸ್ಟ್ ಫ್ರಾಂಚೈಸಿ ಅವಾರ್ಡ್‌ನ್ನು ಪಡೆದುಕೊಂಡಿತು. ಬ್ರೈನೋಬ್ರೈನ್ ಇಂಟರ್‌ನ್ಯಾ?ನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್ ಟ್ರೋಫಿ ಮತ್ತು ಪದಕಗಳನ್ನು ವಿತರಿಸಿದರು. ಪ್ರಾದೇಶಿಕ ನಿರ್ದೇಶಕ ನೀಲ್ ಕಮಲ್ ಹಾಗೂ ವಿವಿಧ ರಾಜ್ಯಗಳ ತರಬೇತಿ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಚಾಂಪಿಯನ್ ಟ್ರೋಫಿ ವಿಜೇತರು: ಎಚ್.ಜೆ.ಚೇತಸ್, ನುಷ್ಕಂ ಕೊಡೆಂದರ, ದೃತಿ ಜೆ.ಪೂಜಾರಿ, ಎನ್.ಕೆ.ಚಹನ, ನಾಪಂಡ ನೀಶ ಪೂವಣ್ಣ, ಪ್ರತ್ಯೂಶ ಎಂ.ಸುವರ್ಣ, ಮೀನಾಕ್ಷಿ ಡಿ.ಎಂ. ಚಿನ್ನದ ಪದಕ ವಿಜೇತರು: ಎನ್.ನಿರನ್ ಪೂವಣ್ಣ, ಜಿ.ವಿ.ಲಿಕಿತ್, ಡಬ್ಲ್ಯೂ.ವಿ.ಕುನಾಲ್ ಪ್ರಸಾದ್ ಪ್ರಶಸ್ತಿ ಪಡೆದುಕೊಂಡರು.