

ರಾಣೆಬೆನ್ನೂರ: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಮಂಗಳವಾರ ತಾಲೂಕಿನ ಹಿರೇಬಿದರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ ರುಚಿ ಬಿಂದಲ್, ಅಂಗನವಾಡಿ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಹಾಗೂ ಆಹಾರ ಪದಾರ್ಥದ ದಾಸ್ತಾನು ಮಾಹಿತಿಯನ್ನು ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಅಂಗನವಾಡಿಯ ನೆಲದಲ್ಲಿ ಮೇಲೆ ಕುಳಿತುಕೊಂಡು ಅಂಗನವಾಡಿಗೆ ಬಂದ ಮಕ್ಕಳನ್ನು ಆರೈಕೆ ಮಾಡಿದರು. ಈ ವೇಳೆ ಅಳುತ್ತಿದ್ದ ಮಗುವನ್ನು ಸಿಇಓ ರುಚಿ ಅವರನ್ನು ಅಪ್ಪಿಕೊಂಡ ಸಂತೈಸಿದರು. ಬಳಿಕ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಕೈಗೊಂಡ ಕ್ರಮದ ಕುರಿತು ಪರಿಶೀಲನೆ ಕೈಗೊಂಡರು.
ಇದಾದ ನಂತರ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನದ ಕುರಿತು ಸಭೆ ನಡೆಸಿದರು.