VIDEO | ಶೂನ್ಯ ನೆರಳಿಗೆ ಸಾಕ್ಷಿಯಾದ ಬೆಂಗಳೂರಿನ ಜನತೆ; ಫೋಟೋ, ವಿಡಿಯೋ ವೈರಲ್

Zero Shadow Day
Published on

ಬೆಂಗಳೂರು: ಅಪರೂಪದ ಆಕಾಶ ವಿದ್ಯಮಾನವೊಂದಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ದಿನದ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಬೆಳಕಿನಿಂದ ಯಾವುದೇ ನೆರಳು ಕಾಣಿಸಿಲ್ಲ. 'ಝೀರೋ ಶ್ಯಾಡೋ ಡೇ' ಎಂಬ ಅಪರೂಪದ ವಿದ್ಯಮಾನ ಇಂದು(ಏ.25) ಮಧ್ಯಾಹ್ನ 12:17ಕ್ಕೆ ನಡೆದಿದೆ.

ಫೋಟೋ ವೈರಲ್

ಇದೀಗ ಸಮಾಜಿಕ ಜಾಲತಾಣದಲ್ಲಿ "ಝೀರೋ ಶ್ಯಾಡೋ ಡೇ" ದಿನ ಫೋಟೊ, ವಿಡಿಯೋಗಳು ವೈರಲ್ ಆಗುತ್ತಿವೆ. ಶೂನ್ಯ ನೆರಳು ದಿನ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ. ಇಂದಿನ ಈ ವಿದ್ಯಮಾನವನ್ನು ಬೆಂಗಳೂರಿನ ಜನರು ಕಣ್ತುಂಬಿಕೊಂಡಿದ್ದಾರೆ. ಶೂನ್ಯ ನೆರಳಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಶೂನ್ಯ ನೆರಳಿನ ದಿನ

ಸೂರ್ಯನ ಬಿಸಿಲು ನೇರವಾಗಿ ನೆತ್ತಿ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ನೆರಳು ಭೂಮಿಗೆ ಬೀಳುವುದಿಲ್ಲ. ಈ ಸಮಯದಲ್ಲಿ ಉದ್ದವಾಗಿ ನಿಂತ ಯಾವುದೇ ವಸ್ತು, ವ್ಯಕ್ತಿಯ ನೆರಳು ಭೂಮಿಯ ಮೇಲೆ ಕಾಣಿವುದಿಲ್ಲ. ಸೂರ್ಯ ನಮ್ಮ ನೆತ್ತಿಯ ಮೇಲೇ ಇರುತ್ತಾನೆ. ಇದರಿಂದ ನಮ್ಮ ನೆರಳಿನ ಉದ್ದ ಅತ್ಯಂತ ಕಡಿಮೆ ಆಗುತ್ತದೆ. ಹೀಗಾಗಿ, ನಾವು ಬಿಸಿಲಿನಲ್ಲಿ ನಿಂತರೂ ನಮ್ಮ ನೆರಳು ಕಾಣೆಯಾಗಿರುತ್ತದೆ. ಇದನ್ನೇ ಶೂನ್ಯ ನೆರಳಿನ ದಿನ ಎನ್ನಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net