Bengaluru :ವಿಶೇಷ ಚೇತನ ಹೆಣ್ಣು, 2 ವರ್ಷದ ಗಂಡು ಮಗು..ಇಬ್ಬರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆ ಶರಣಾದ ಬೆಂಗಳೂರಿನ ಟೆಕ್ಕಿ ದಂಪತಿ

Bengaluru techie family
Published on

ಬೆಂಗಳೂರು:  ( Bengaluru ) ವಿಶೇಷ ಚೇತನ ಹೆಣ್ಣು, 2 ವರ್ಷದ ಗಂಡು ಮಗು..ಇಬ್ಬರನ್ನು ಹತ್ಯೆ ಮಾಡಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಬೆಂಗಳೂರಿನ  ಸದಾಶಿವ ನಗರದ ಆರ್.ಎಂ.ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ನಡೆದಿದೆ.

ನೂಪ್ ಕುಮಾರ್ (38), ಪತ್ನಿ ರಾಖಿ (35) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಅನುಪ್ರಿಯ, ವಿಶೇಷ ಚೇತನ ಮಗಳು (5 ವರ್ಷ) ಪ್ರಿಯಾಂಶ್​, ಮಗ (2 ವರ್ಷ) ಮೃತ ಮಕ್ಕಳು. ಇವತ್ತು ಬೆಳಗ್ಗೆ ಒಂದೇ ಕುಟುಂಬದ ನಾಲ್ಕು ಜನರ ದುರಂತ ಬೆಳಕಿಗೆ ಬಂದಿದೆ.

ಐದು ವರ್ಷದ ವಿಶೇಷ ಚೇತನ ಹೆಣ್ಣು ಮಗು ಮತ್ತು ಎರಡು ವರ್ಷದ ಗಂಡು ಮಗುವಿಗೆ ದಂಪತಿ ವಿಷ ಕುಡಿಸಿ, ಬಳಿಕ ತಾವು ನೇಣಿಗೆ ಶರಣಾಗಿದ್ದಾರೆ.  ನೂಪ್ ಕುಮಾರ್ ದಂಪತಿ  ಟೆಕ್ಕಿಗಳಾಗಿದ್ದು, ವರ್ಕ್ ಫ್ರಂ ಹೋಮ್ ಮಾಡುತಿದ್ದರು ಎಂದು ತಿಳಿದುಬಂದಿದೆ.

ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net