

ಹೆಲ್ಮೆಟ್ ತೆಗೆದುಕೊಳ್ಳುವ ನೆಪದಲ್ಲಿ ಕೈ ಸವರಿ, ಪೋನ್ ನಂಬರ್ ಕೇಳಿ ರ್ಯಾಪಿಡೋ ಬೈಕ್ ರೈಡರ್.
ಲೈಂಗಿಕ ಕಿರುಕುಳದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ಪೋಸ್ಟ್.
ಪುಲಕೇಶಿನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ.
ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್, ಬೈಕ್ ಬುಕ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚೇ ಇದೆ. ಬಸ್ ಲಭ್ಯವಿಲ್ಲದ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಉಬರ್ ಹಾಗೂ ರ್ಯಾಪಿಡೋದಲ್ಲಿ ಪ್ರಯಾಣಿಸುವುದನ್ನು ಜನರು ನೆಚ್ಚಿಕೊಂಡಿದ್ದಾರೆ. ಆದರೆ, ಈ ಮಧ್ಯೆ ಹೆಣ್ಣು ಮಕ್ಕಳ ಸುರಕ್ಷತೆಗೆ ಧಕ್ಕೆ ತರುವಂತಹ ವಿಚಾರವೊಂದು ಪುಲಕೇಶಿನಗರದಲ್ಲಿ ಬೆಳಕಿಗೆ ಬಂದಿದೆ.
ಸೈಯದ್ ಎಂಬ ರ್ಯಾಪಿಡೋ ಚಾಲಕನೊಬ್ಬ ಯುವತಿಯೊಬ್ಬಳಿಗೆ ಹೆಲ್ಮೆಟ್ ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಆ ಮೂಲಕ ರಾತ್ರಿ ಅಥವಾ ಯಾವುದೇ ಸಮಯದಲ್ಲಿ ಕ್ಯಾಬ್, ಬೈಕ್ನಲ್ಲಿ ಪ್ರಯಾಣಿಸುವ ಯುವತಿಯರು ಎಚ್ಚರಿಕೆಯಿಂದಿರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಸಲಹೆ ನೀಡಿದ್ದಾರೆ.
ವರದಿಗಳ ಪ್ರಕಾರ, ಯುವತಿಯೊಬ್ಬರು ಮೂರು ದಿನದ ಹಿಂದೆ ಪುಲಕೇಶಿನಗರದಲ್ಲಿನ ತಮ್ಮ ನಿವಾಸಕ್ಕೆ ರ್ಯಾಪಿಡೋ ಬುಕ್ ಮಾಡಿಕೊಂಡಿದ್ದರು. ರಾತ್ರಿಯಾಗಿತ್ತು. ಹೀಗಾಗಿ ಈ ಅಪ್ಲಿಕೇಷನ್ನಲ್ಲಿ ವಿಶೇಷವಾಗಿರುವ ರೇಟಡ್ ಬೈ ವುಮೆನ್ ವರ್ಷನ್ನಲ್ಲಿ ಬೈಕ್ ಬುಕ್ ಮಾಡಿಕೊಂಡರು. ಮಹಿಳೆಯರಿಂದ ಹೆಚ್ಚು ರೇಟಿಂಗ್ ಗಳಿಸಿದ ಸೈಯದ್ ರ್ಯಾಪಿಡೋ ರೈಡ್ ಅಕ್ಸೆಪ್ಟ್ ಮಾಡಿಕೊಂಡ..ಪ್ರಯಾಣಿಸುತ್ತಿರುವಾಗ ಈತ ಮಧ್ಯೆ ಮಧ್ಯೆ ಅನಾವಶ್ಯಕವಾಗಿ ಇರಿಟೇಟ್ ಆಗುವಂತೆ ಮಾತನಾಡುತ್ತಿದ್ದ. ರೇನ್ ಕೋಟ್ ಬೇಕಾ ಎಂದು ಸಹ ಕೇಳಿದ್ದಾನೆ. ಯುವತಿ, ಬೇಡ ಎಂದು ನೇರವಾಗಿ ಹೇಳಿದರೂ ಸಹ ಬಿಡದ ಆತ ಅನಗತ್ಯವಾಗಿ ಆಕೆಯೊಂದಿಗೆ ಮಾತಿಗೆ ಇಳಿದಿದ್ದಾನೆ.
ಯುವತಿಯನ್ನು ಡ್ರಾಪ್ ಮಾಡಿದ ಬಳಿಕ ಆಕೆ ಹೆಲ್ಮೆಟ್ ಹಿಂದಿರುಗಿಸುವಾಗ ಕೈ ಸವರಲು ಯತ್ನಿಸಿದ್ದಾನೆ. ಇನ್ನೂ ಹಣ ಪಾವತಿ ಮಾಡುವ ವೇಳೆ, ಸ್ಕ್ಯಾನರ್ ವರ್ಕ್ ಆಗ್ತಿಲ್ಲ. ನಂಬರ್ ತಗೊಳ್ಳಿ ಎಂದು ನಾಟಕವಾಡಿದ್ದ. ಆತನ ಬಗ್ಗೆ ಅರಿತ ಯುವತಿ ಬೇಡ ಎಂದು ಸ್ಕ್ಯಾನರ್ಗೆ ಹಣ ಪಾವತಿ ಮಾಡಿದ್ದಾಳೆ.
ಆನಂತರ ಸ್ಕ್ಯಾನರ್ ಕೇಳಿ ಪೇ ಮಾಡಿದ ನಂತರ ಅಲ್ಲಿಂದ ಹೊರಡದೆ ಗುರಾಯಿಸಿ ಆಕೆಯನ್ನು ನೋಡುತ್ತಾ ನಿಂತಿರುವುದನ್ನು ಆಕೆ ಗಮನಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲದೇ ಸೆಕ್ಯೂರಿಟಿ ಗಾರ್ಡ್ ಹೇಳಿದ್ರು ಅಲ್ಲೇ ನಿಂತು ನೋಡುತ್ತಿದ್ದರಂತೆ ಈ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡ ಯುವತಿ.
ರಾತ್ರಿಯಾಗಲಿ, ಹಗಲಿನಲ್ಲಾಗಲಿ ಯುವತಿಯರು ಪ್ರಯಾಣಿಸುವಾಗ ಇಂತಹ ಪುಂಡರೊಟ್ಟಿಗೆ ಹುಷಾರಾಗಿರಿ. ಒಂದು ನಿಮ್ಮ ಪರಿಚಿತರ ಜೊತೆಗೆ ಟಚ್ನಲ್ಲಿ ಮಾತನಾಡಿ, ಇಲ್ಲವಾದಲ್ಲಿ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).