ಬೆಂಗಳೂರಲ್ಲಿ ಅಲರ್ಟ್​: ಜನನಿಬಿಡ ಸ್ಥಳಗಳಲ್ಲಿ ಖಾಕಿ ಕಣ್ಗಾವಲು

banglore police
Published on

ಬೆಂಗಳೂರು: ದೆಹಲಿಯಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಹಾಗೂ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಜನನಿಬಿಡ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ಸ್ಟೇಷನ್​ಗಳಲ್ಲಿ ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ತಂಡದೊಂದಿಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್​ಗಳು, ಲಾಡ್ಜ್​ಗಳು, ಅನುಮಾನಸ್ಪದ ವಾಹನಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಇಂದು(ಶನಿವಾರ) ಏಕಕಾಲಕ್ಕೆ 6 ಡಿಸಿಪಿ, 10 ಎಸಿಪಿ, 25 ಇನ್​ಸ್ಪೆಕ್ಟರ್​ಗಳ ತಂಡದಿಂದ ಪರಿಶೀಲನೆ ನಡೆಸುತ್ತಿದೆ.

ಅನುಮಾನಸ್ಪದ ವಸ್ತುಗಳು, ಅನುಮಾನಸ್ಪದ ವ್ಯಕ್ತಿಗಳನ್ನ ಕಂಡ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಎರಡು ದಿನದ ಹಿಂದೆ ದೆಹಲಿಯಲ್ಲಿ ಹರ್ಕತ್ ಉಲ್ ಅನ್ಸರ್ ಸಂಘಟನೆಯ ಉಗ್ರರರ ಬಂಧನವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net