ಸಾಲ ತೀರಿಸಲು ಹಣಕ್ಕಾಗಿ ಕಿಡ್ನಾಪ್​ ನಾಟಕ; ಸ್ನೇಹಿತರ ಜೊತೆ ಜೊತೆ ಲಲ್ಲೆ ಹೊಡೆಯುತ್ತಿದ್ದ ಕಂಟ್ರ್ಯಾಕ್ಟರ್ ಅರೆಸ್ಟ್..Bengaluru

ಸಾಲ ತೀರಿಸಲು ಹಣಕ್ಕಾಗಿ ಕಿಡ್ನಾಪ್​ ನಾಟಕ; ಸ್ನೇಹಿತರ ಜೊತೆ ಜೊತೆ ಲಲ್ಲೆ ಹೊಡೆಯುತ್ತಿದ್ದ ಕಂಟ್ರ್ಯಾಕ್ಟರ್ ಅರೆಸ್ಟ್..Bengaluru
Published on: 
  • ಹಣಕ್ಕಾಗಿ ಕಿಡ್ನ್ಯಾಪ್​ ನಾಟಕವಾಡಿದ್ದ ಕಾಂಟ್ರ್ಯಾಕ್ಟರ್ ಮನೀಶ್ ಪಟೇಲ್.

  • ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು 90 ಲಕ್ಷ ರೂ.ಗೆ ಬೇಡಿಕೆ.

  • ವಿದ್ಯುತ್ ಕಾಂಟ್ರಾಕ್ಟ್ ಕೆಲಸದಲ್ಲಿ ನಷ್ಟವಾಗಿ 1.5 ಕೋಟಿ ರೂ. ಸಾಲ ಮಾಡಿಕೊಂಡಿದ್ದ ಮನೀಶ್.

ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ತಾನು ಕಿಡ್ನಾಪ್​ ಆಗಿದ್ದೇನೆ ಎಂದು ನಾಟಕವಾಡಿ, ತಂದೆಯಿಂದಲೇ ಹಣ ದೋಚಲು ಹೋಗಿ ಪೊಲೀಸರ ಕೈಗೆ ತಗ್ಲಾಕ್ಕೊಂಡ ಘಟನೆ ಬೆಂಗಳೂರಿನ ಆರ್​ ಆರ್​ ನಗರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಆರ್.ಆರ್. ನಗರದ ನಿವಾಸಿಯೂ ಹಾಗೂ ಕಂಟ್ರ್ಯಾಕ್ಟರ್ ಆಗಿರುವ ಮನೀಶ್ ಪಟೇಲ್ (40) ಅನ್ನು ಪೊಲೀಸರು ಬಂಧಿಸಿದ್ದಾರೆ.

ಏನಾಗಿತ್ತು?

ಸೆ.29ರಂದು ಅವರ ತಂದೆ ಮನೋಹರ್​ ಪಾಟೀಲ್​ಗೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೀಷ್​ ಮೊಬೈಲ್​ನಿಂದ ವಾಟ್ಯಾಪ್​ ಕರೆ ಬಂದಿದೆ. ನಿಮ್ಮ ಮಗನನ್ನು ಕಿಡ್ನ್ಯಾಪ್​ ಮಾಡಿದ್ದೇವೆ ನಾವು ಹೇಳಿದ ಜಾಗಕ್ಕೆ 90 ಲಕ್ಷ ರೂ. ಹಣಕ್ಕೆ ತಂದು ಕೊಡಿ ಎಂದು ಆತನ ಸ್ನೇಹಿತರಿಂದ ಡಿಮ್ಯಾಂಡ್ ಮಾಡಿ ಕೇಳಲಾಗಿತ್ತು.

ಮನೀಷ್ ವ್ಯವಹಾರದ ವಿಚಾರವಾಗಿ​ ಗದಗಕ್ಕೆ ಟ್ರೈನ್​ನಲ್ಲಿ ತೆರಳುತ್ತೇನೆ. ಬೆಳಿಗ್ಗೆ ಕಾಲ್​ ಮಾಡಿ ಹೇಳ್ತಿನಿ ಎಂದಿದ್ದ. ಆದರೆ ಆ ಮಧ್ಯೆ ಮನೀಷ್​​ನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಬಂದಿದ್ದ ಕರೆ ಮನೋಹರ್ ಆತಂಕಗೊಂಡು ಆರ್​ಆರ್ ನಗರ ಪೊಲೀಸರಿಗೆ ದೂರು ನೀಡಿದ್ದರು.

ಪತ್ತೆ ಹಚ್ಚಿದ್ದು ಹೇಗೆ?

ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಮನೀಷ್ ಮೊಬೈಲ್​ಗೆ ಒಟ್ಟು ನಾಲ್ಕೈದು ಬಾರಿ ಕರೆ ಮಾಡಿ ಟ್ರ್ಯಾಕ್ ಮಾಡಲು ಯತ್ನಿಸಿದರು. ಆದರೆ ಮೊಬೈಲ್​​ ಸ್ವಿಚ್​​ ಆಫ್​ ಆಗಿರುವುದು ಗೊತ್ತಾಗಿದೆ. ನಂತರ ಹಣ ಅರೇಂಜ್​ ಆಯ್ತಾ ಎಂದು ವಾಪಸ್​ ಕರೆ ಮಾಡಿದ್ದರು, ಈ ವೇಳೆ ಅದೇ ನಂಬರ್​​ ಅನ್ನು ತೆಗೆದುಕೊಂಡು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಮನೀಷ್​ ಅವರು ಸ್ನೇಹಿತರ ಜೊತೆ ಅರಾಮಾಗಿ ಇರುವುದು ಕಂಡುಬಂದಿದೆ.

ಇದನ್ನೂ ಓದಿ: ಖೋಟಾ ನೋಟು ಚಲಾವಣೆ ಜಾಲ ಪತ್ತೆ 7 ಬಂಧನ

ಮನೀಷ್​ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಹೇಲಿದ್ದಿಷ್ಟು, ಇತ್ತೀಚೆಗೆ ಎಲೆಕ್ಟ್ರಿಕ್​ ಕಾಂಟ್ರ್ಯಾಕ್ಟ್ ವಿಚಾರವಾಗಿ 1.5 ಕೋಟಿ ಸಾಲ ಮಾಡಿಕೊಳ್ಳಲಾಗಿತ್ತು. ಇದನ್ನು ತೀರಿಸಲು ಕಿಡ್ನ್ಯಾಪ್​ ನಾಟಕವಾಡಿದ್ದಾಗಿ ಮನೀಷ್​​ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net