

ಬೆಂಗಳೂರು: ಹೊಟೇಲ್ಗೆ ಊಟಕ್ಕೆ ಹೋದರೆ ಎಷ್ಟು ಬಿಲ್ ಆಗಬಹುದು. ಇದನ್ನೆಲ್ಲ ಯೋಚನೆ ಮಾಡದೆ ಮೊದಲು ಊಟ ಮಾಡಿ ಮುಗಿಸುತ್ತೇವೆ. ಇದಕ್ಕೆ ನಮ್ಮ ಬಜೆಟ್ಗೆ ಅನುಗುಣವಾಗಿ ಹೊಟೇಲ್ ಆಯ್ದುಕೊಂಡಿರುತ್ತವೆ.
ಆದರೆ ಈ ಮನುಷ್ಯ 2019ರಲ್ಲಿ ಊಟಕ್ಕಾಗಿ ಖರ್ಚು ಮಾಡಿರುವುದು ಬರೋಬ್ಬರಿ 2.8 ಲಕ್ಷ ರೂಪಾಯಿಗಳನ್ನು. ಹೌದು, ಇದು ನಡೆದಿರುವುದು ಪ್ರಪಂಚದ ಯಾವುದೋ ಮೂಲೆಯಲ್ಲಿ ಅಲ್ಲ. ಬದಲಿಗೆ ಈತ ಬೆಂಗಳೂರಿನವನು.
2019ರಲ್ಲಿ ಈ ರೀತಿ ಬಿಲ್ ಬಗ್ಗೆ ಯೋಚನೆ ಮಾಡದೆ ಊಟ ಮಾಡಿದವರ ವಿವರ ಈಗ ಲಭ್ಯವಾಗಿದೆ. ರೆಸ್ಟೂರೆಂಟ್ ಸೆಲ್ಯೂಷನ್ ಕಂಪನಿ ಡೈನ್ ಔಟ್ ಎಂಬ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತ ದೇಶಾದ್ಯಂತದ ವರದಿಗಳಿವೆ.
ಭಾರತ ದೇಶದಲ್ಲಿ ಉಳಿದೆಲ್ಲ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಹೊಟೇಲ್ಗಳಲ್ಲಿ ಊಟ ಮಾಡುವವರು ಹೆಚ್ಚು ಎನ್ನುತ್ತದೆ ಆ ವರದಿ. ಇದೇ ವರದಿಯಲ್ಲಿ ಬೆಂಗಳೂರಿಗನೊಬ್ಬ 2,76,988 ರೂಪಾಯಿಯಷ್ಟು ಬಿಲ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ ಒಂದು ದಿನಕ್ಕೆ 10 ಲಕ್ಷ ಮಂದಿ ಹೊಟೇಲ್ ಮೇಲೆ ಅವಲಂಬಿತರಾಗಿದ್ದಾರೆ.
ವರದಿ ಪ್ರಕಾರ ವರ್ಷದಲ್ಲಿ 5 ಬಿಲಿಯನ್ನಷ್ಟು ಮಂದಿ ಹೊಟೇಲ್ನಲ್ಲಿ ಊಟ ಮಾಡುತ್ತಾರೆ. ಪ್ರತಿ ಗಂಟೆಗೆ 4566 ಟೇಬಲ್ಗಳು ಊಟಕ್ಕಾಗಿ ಬುಕ್ ಮಾಡಲಾಗುತ್ತದೆ. 300 ರೂಪಾಯಿಗಳಿಂದ 1600 ರೂಪಾಯಿಗಳವರೆಗೆ ಒಂದು ಊಟಕ್ಕೆ ವ್ಯಯಿಸಲಾಗುತ್ತದೆ ಎನ್ನುತ್ತದೆ ವರದಿ.
ಇನ್ನು ರಾಷ್ಟ್ರ ರಾಜದಾನಿ ದೆಹಲಿ ಕತೆಯೇ ಬೇರೆ ಇದೆ. ಇಲ್ಲಿನ ಒಂದುಮ ಕುಟುಂಬ ವರ್ಷಕ್ಕೆ 179 ಬಾರಿ ಹೊಟೇಲ್ ಊಟಕ್ಕೆ ತೆರಳುತ್ತಾರೆ. ಜತೆಗೆ 3.5 ಲಕ್ಷ ರೂಪಾಯಿಗಳನ್ನು ಆ್ಯಪ್ ಬಳಸುವ ಮೂಲಕ ಉಲಿತಾಯ ಮಾಡುತ್ತಾರೆ.
ಇಡೀ ಭಾರತದಲ್ಲಿ ಅತಿ ಹೆಚ್ಚು ಊಟ ಮಾಡುವ ಅಥವಾ ಆರ್ಡರ್ ಮಾಡಿರುವುದು ನಾರ್ಥ ಇಂಡಿಯನ್ ಶೈಲಿಯ ಊಟಕ್ಕೆ ಎನ್ನುವುದು ವಿಶೇಷ! (ಏಜೆನ್ಸೀಸ್)