Bengaluru: ಸಾಕು ನಾಯಿ ಸತ್ತ  ಬೆನ್ನಲ್ಲೇ ಪ್ರಾಣ ಬಿಟ್ಟ ಬೆಂಗಳೂರಿನ ಯುವಕ

Bengaluru man ends life after pet dog dies
Published on

ನೆಲಮಂಗಲ:  ( Bengaluru ) ತನ್ನ ಮುದ್ದಿನ ನಾಯಿ ಸಾವಿನ ನೋವು ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರದಲ್ಲಿ ನಡೆದಿದೆ.

ಗ್ರಾಮದ ರಾಜಶೇಖರ್ (33) ಮೃತ. ಈತ ಸಾಕುನಾಯಿ ಸಾವನ್ನಪ್ಪಿದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ರಾಜಶೇಖರ್ ಅವರ ಬಳಿ ಇದ್ದ ಜರ್ಮನ್ ಶಫರ್ಡ್ ತಳಿಯ ಸಾಕುನಾಯಿ ‘ಬೌನ್ಸಿ’ ಮಂಗಳವಾರ ಮೃತಪಟ್ಟಿತ್ತು.

ರಾಜಶೇಖರ್ 9 ವರ್ಷಗಳ ಹಿಂದೆ ‘ಬೌನ್ಸಿ’ ಎಂಬ ಹೆಸರು ನೀಡಿ ನಾಯಿಯನ್ನು ಖರೀದಿಸಿ ತಂದಿದ್ದರು. ಮಂಗಳವಾರ ‘ಬೌನ್ಸಿ’ ಅನಾರೋಗ್ಯದಿಂದ ಮೃತಪಟ್ಟಿತ್ತು. ತಮ್ಮ ಜಮೀನಿನಲ್ಲಿ ‘ಬೌನ್ಸಿ’ಯ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದ ರಾಜಶೇಖರ್ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೆಳಗಿನ ಜಾವದಲ್ಲಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ.ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಮತ್ತು ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net