ಗಿಳಿ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ ಕುಟುಂಬ!

parrot
ಸಾಂದರ್ಭಿಕ ಚಿತ್ರ
Published on

ಪಶ್ಚಿಮ ಬಂಗಾಳ: ಕಲವರು ಪ್ರಾಣಿ ಮತ್ತು ಪಕ್ಷಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ಹೊಂದಿರುತ್ತಾರೆ. ತಮ್ಮ ಮನೆಯ ಕುಟುಂಬಸ್ಥರು ಹಾಗೂ ಮನೆ ಮಂದಿಯಂತೆ ನೋಡುವವರಿದ್ದಾರೆ. ಹೀಗೆ ವ್ಯಕ್ತಿಯೊಬ್ಬರು ತನ್ನ ಮುದ್ದಿನ ಗಿಳಿ ನಿಧನವಾದ ಹಿನ್ನೆಲೆ ಅಂತಿಮ ವಿಧಿವಿಧಾನಗಳನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಸುದ್ದಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ ಮಜುಂದಾರ್ ಕಳೆದ 25 ವರ್ಷಗಳಿಂದ ಗಿಳಿಯೊಂದನ್ನು ಸಾಕಿದ್ದ. ಪ್ರೀತಿಯಿಂದ ಭಕ್ತೋ ಎಂದು ಹೆಸರಿಟ್ಟಿದ್ದರು. ಆದರೆ ಅದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದೆ.

ಗಿಳಿಯನ್ನು ಮನೆ ಸದಸ್ಯನಂತೆ ನೋಡಿಕೊಂಡಿದ್ದ ಮಜುಂದಾರ್ ಕುಟುಂಬವು ಹಿಂದೂ ಸಂಪ್ರದಾಯಗಳ ಪ್ರಕಾರ ಅದರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿತ್ತು. ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಸಹಾಯ ಮಾಡಿದ್ದರು.

ನಡೆದಿದ್ದೇನು?:

ಮಜುಂದಾರ್ ಕುಟುಂಬವು ಅರ್ಚಕರನ್ನು ಕರೆದು ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ಪಾರ್ಥಿವ ಶರೀರವನ್ನು ನೈಹಟಿಯ ಹೂಗ್ಲಿ ನದಿ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಈ ವೇಳೆ 25 ಜನರನ್ನು ಕರೆಸಿ ಊಟ ಹಾಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net