ತೋಟಗಾರ್ಸ್‌ ಸೊಸೈಟಿಗೆ ಲಾಭ

society
ಸಾಗರದಲ್ಲಿ ಆಯೋಜಿಸಿದ್ದ ತೋಟಗಾರ್ಸ್‌ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಕೆ.ಸಿ.ದೇವಪ್ಪ ಮಾತನಾಡಿದರು. ಎಂ.ಜಿ.ಪ್ರಕಾಶ್, ಎಂ.ಜಿ.ಶ್ರೀಕಂಠ, ಡಿ.ಪಿ.ಕೃಷ್ಣಮೂರ್ತಿ, ಎಂ.ಸುಬ್ರಾಯ, ನಿರ್ಮಲಾ, ಅನುಪಮಾ ಇತರರಿದ್ದರು.
Published on

ಸಾಗರ: ಕಮಿಷನ್ ದರದಲ್ಲಿ ಆದ ಹಿನ್ನಡೆ, ಪೌತಿ ಸದಸ್ಯರು ಹಾಗೂ ದೀರ್ಘಕಾಲದ ಸುಸ್ತಿದಾರರಿಗೆ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಮೊದಲಾದ ಸವಾಲುಗಳ ಹೊರತಾಗಿಯೂ ಸಂಸ್ಥೆ 64.47 ಲಕ್ಷ ರೂ. ಲಾಭ ಗಳಿಸಿದೆ ಎಂದು ನಗರದ ತೋಟಗಾರ್ಸ್‌ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ.ದೇವಪ್ಪ ಹೇಳಿದರು.

ಸಾಗರದಲ್ಲಿ ಏರ್ಪಡಿಸಿದ್ದ ಸೊಸೈಟಿಯ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸಹಕಾರಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಿಗೆ ವಿಶ್ರಾಂತಿ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆ ನಡೆದಿದೆ. ಹೀಗೆ ನಿರ್ಗಮಿಸಿದವರು ಸಂಸ್ಥೆಯ ಕಟ್ಟಡ ನಿಧಿಗೆ ದೇಣಿಗೆಯನ್ನೂ ನೀಡಿದರು. ಈ ಬಾರಿ 8 ಜನ ಹೊಸ ನಿರ್ದೇಶಕರ ಜತೆ ಆಡಳಿತ ಮಂಡಳಿ ಕೆಲಸ ಮಾಡುತ್ತದೆ ಎಂದರು.ಸಸ

ಸಂಸ್ಥೆಯು ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ತಯಾರಿಗಳು ಆರಂಭವಾಗಿವೆ. ಬಂದಿರುವ ಲಾಭದಲ್ಲಿ ಈ ಕಾರ್ಯಕ್ರಮಕ್ಕೆ ದೊಡ್ಡ ಮೊತ್ತವನ್ನು ತೆಗೆದಿರಿಸಲಾಗಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸ್ಮರಣ ಸಂಚಿಕೆಯ ಯೋಜನೆ ಹಾಗೂ ಎಲ್ಲ ಷೇರುದಾರ ಸದಸ್ಯರಿಗೆ ಒಪ್ಪುವಂತಹ ನೆನಪಿನ ಕಾಣಿಕೆ ಕೊಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಚಿಂತಿಸಿದೆ ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ನಿರ್ದೇಶಕರಾದ ಎಂ.ಜಿ.ಶ್ರೀಕಂಠ, ಡಿ.ಪಿ.ಕೃಷ್ಣಮೂರ್ತಿ, ಎಂ.ಸುಬ್ರಾಯ ಮಾವಿನಸರ, ನಿರ್ಮಲಾ, ಅನುಪಮಾ, ಬಿ.ಆರ್.ಅಶೋಕ, ಕೆ.ಎಲ್.ಗಣೇಶ್ ಕಾಕಾಲ್, ಟಿ.ಎನ್.ಭಾಸ್ಕರ, ಕೆ.ಎನ್.ಮಂಜುನಾಥ ಕೌಲ್ಮನೆ, ಎಸ್.ವೀರೇಶ್, ಜಿ.ಎನ್.ಸುಧೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net