

ನವದೆಹಲಿ: ಮಾಂಸಹಾರಿಗಳಿಗೆ ಊಟದಲ್ಲಿ ತುಂಬಾ ಆಯ್ಕೆಗಳಿವೆ. ಸಾಮಾನ್ಯವಾಗಿ ಎಲ್ಲಾ ಮಾಂಸಹಾರಿಗಳು ಮಟನ್, ಚಿಕನ್, ಮೀನು ತಿಂದಿರುತ್ತೇವೆ. ಆದರೆ ಕೋಳಿ ಮಾಂಸ ಎಂದರೆ ಹಲವರಿಗೆ ಇಷ್ಟ. ನಾವು ಇಂದು ಹೇಳುತ್ತಿರುವುದು ಕಡಕ್ನಾಥ್ ಕೋಳಿ (ಕಪ್ಪು ಕೋಳಿ).
ಕಡಕ್ನಾಥ್ ಕೋಳಿ (ಕಪ್ಪು ಕೋಳಿ) ಬಗ್ಗೆ ಎಂದಾದರೂ ನೀವು ಕೇಳಿದ್ದೀರಾ? ಅಷ್ಟಕ್ಕೂ ಈ ಕೋಳಿ ಯಾವುದು? ಎಲ್ಲಿ ಸಿಗುತ್ತದೆ ಅಂತ ಯೋಚಿಸ್ತಿದ್ರೆ ಎಂದು ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...........
ಕಡಕ್ನಾಥ್ ಕೋಳಿ ಮೊದಲು ಮಧ್ಯಪ್ರದೇಶದಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಹೆಚ್ಚು ಕಡಿಮೆ ಎಲ್ಲಾ ಸ್ಥಳಗಳಲ್ಲಿ ಕಡಕ್ನಾಥ್ ಕೋಳಿ ಸಾಕಾಣಿಕೆ ಪ್ರಾರಂಭವಾಗಿದೆ. ನಗರದಲ್ಲಿ ಮಾಂಸವು ಕೆಜಿಗೆ 1,000 ರಿಂದ 1,200 ರೂ.ಗೆ ಮಾರಾಟವಾಗುತ್ತಿದ್ದು, ಜೀವಂತ ಕೋಳಿಗೆ ಕೆಜಿಗೆ 850 ರೂ. ಇದೆ. ಇದನ್ನು ಹೆಚ್ಚಾಗಿ ಬುಡಕಟ್ಟು ಸಮುದಾಯಗಳು ಬೆಳೆಸುತ್ತಾರೆ. ಈ ಕೋಳಿ ನೋಡಲು ಮಾತ್ರ ಕಪ್ಪು ಬಣ್ಣದ್ದಾಗಿರುವುದಿಲ್ಲ. ಅದರ ಗರಿಗಳಿಂದ ಮಾಂಸ, ಮೊಟ್ಟೆ ಕೂಡ ಕಪ್ಪು. ಕಡಕ್ನಾಥ್ ಕೋಳಿ ಸಾಮಾನ್ಯ ತೂಕವನ್ನು ಪಡೆಯಲು ಸುಮಾರು ಎಂಟು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ಬೇರೆ ಕೋಳಿಗಳು ಈ ತೂಕವನ್ನು ಪಡೆಯಲು ಸುಮಾರು 45 ದಿನಗಳನ್ನು ತೆಗೆದುಕೊಳ್ಳುತ್ತದೆ.
ಕಡಕ್ನಾಥ್ ಕೋಳಿ ಗರಿಯಿಂದ ಹಿಡಿದು ಕೊಕ್ಕು, ಕಾಲು, ರೆಕ್ಕೆ, ಕಣ್ಣುಗಳೆಲ್ಲವೂ ಕಪ್ಪಾಗಿರುತ್ತದೆ. ಈ ಕಡಕ್ನಾಥ್ ಕೋಳಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ಈ ಕಡಕ್ನಾಥ್ ಕೋಳಿಯಲ್ಲಿ ಶೇ.1ಕ್ಕಿಂತ ಕಡಿಮೆ ಕೊಬ್ಬಿನಾಂಶವಿದೆ. ಈ ಕಪ್ಪು ಕೋಳಿಯಲ್ಲಿ ವಿಟಮಿನ್ ಬಿ-1, ಬಿ-2, ಬಿ-6, ಬಿ-12, ವಿಟಮಿನ್-ಸಿ ಮತ್ತು ಇ, ನಿಯಾಸಿನ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣಾಂಶವಿದೆ.
ಕಡಕ್ನಾಥ್ ಕೋಳಿ ನೋಡಲು ಹೇಗಿರುತ್ತದೆ?:
ಕಡಕ್ನಾಥ್ ಕೋಳಿ ಆರೋಗ್ಯ ಪ್ರಯೋಜನಗಳು: