ಆಧುನಿಕ ಯಂತ್ರೋಪಕರಣಗಳಿಂದ ಅನುಕೂಲ

blood
ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದಲ್ಲಿ ಅತ್ಯಾಧುನಿಕ ರಕ್ತ ಪರೀಕ್ಷಾ ಯಂತ್ರವನ್ನು ಗುರುದತ್ತ ಹೆಗಡೆ ಉದ್ಘಾಟಿಸಿದರು. ಎಸ್.ಪಿ.ದಿನೇಶ್, ಡಾ. ಶ್ರೀಧರ್, ಡಾ. ದಿನೇಶ್ ಇತರರಿದ್ದರು.
Published on

ಶಿವಮೊಗ್ಗ: ತಂತ್ರಜ್ಞಾನ ಮುಂದುವರಿದ ಪರಿಣಾಮ ಆಧುನಿಕ ಯಂತ್ರಗಳು ಈಗ ಲಭ್ಯವಾಗಿವೆ. ಇದರಿಂದ ಕಾಯಿಲೆಗಳನ್ನು ಶೀಘ್ರ ಪತ್ತೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದಲ್ಲಿ ಅತ್ಯಾಧುನಿಕ ರಕ್ತ ಪರೀಕ್ಷಾ ಯಂತ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಇಂದು ಆಧುನಿಕ ರಕ್ತಪರಿಕ್ಷಾ ಯಂತ್ರಗಳ ಅವಶ್ಯಕತೆ ಬಹಳಷ್ಟಿದೆ. ಯಾಂತ್ರಿಕವಾಗಿ ನಡೆಯುವ ಪರೀಕ್ಷೆಯಲ್ಲಿ ಲೋಪಗಳಾಗುವ ಸಂಭವ ತುಂಬ ಕಡಿಮೆ ಇರುತ್ತದೆ ಎಂದರು.

ಹೊಸ ಯಂತ್ರಗಳು ಕಡಿಮೆ ಲೋಪದ ಮೂಲಕ ತ್ವರಿತವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದ ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆ ತಪ್ಪಿಸಬಹುದು. ಆಸ್ಪತ್ರೆಗಳನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರೆಡ್‌ಕ್ರಾಸ್ ಜಿಲ್ಲಾ ಚೇರ್ಮನ್ ಎಸ್.ಪಿ.ದಿನೇಶ್, ಗೌರವ ಕಾರ್ಯದರ್ಶಿ ಡಾ. ದಿನೇಶ್, ಐಎಂಎ ಅಧ್ಯಕ್ಷ ಡಾ. ಶ್ರೀಧರ್, ನಂಜಪ್ಪ ಲೈಫ್ ಕೇರ್‌ನ ವೈದ್ಯೆ ಡಾ. ನಮೃತಾ ಉಡುಪ, ರಕ್ತದಾನಿ ಧರಣೇಂದ್ರ ದಿನಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net