ಬೆಂಗಳೂರಿಗೆ ಮತ್ತೆ ಮಳೆಯ ಆತಂಕ.... ಹವಾಮಾನ ತಜ್ಞರು ಏನಂತಾರೆ?

1194119
Published on

ಬೆಂಗಳೂರು: ನಿರಂತರ ಮಳೆಯಿಂದ ಈಗಷ್ಟೇ ಬಿಡುವು ಪಡೆದಿರುವ ರಾಜ್ಯ ರಾಜಧಾನಿಗೆ ಮತ್ತೆ ಮಳೆಯ ಆತಂಕ ಎದುರಾಗಲಿದೆಯೇ? ಮುಂದಿನ ಎರಡು ದಿನಗಳ ಕಾಲ ಮತ್ತೆ ಬೆಂಗಳೂರಿನಲ್ಲಿ ಮಳೆ ಸುರಿಯಲಿದೆಯೇ?.

ಹೌದು ಎನ್ನುತ್ತಾರೆ ಹವಾಮಾನ ತಜ್ಞರು. ಈ ಕುರಿತು ನ. 25ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರಿನ ಹವಾಮಾನ ಕೇಂದ್ರದ ಹವಾಮಾನ ತಜ್ಞ ಸದಾನಂದ ಅಡಿಗ ಅವರು, ಇಂದು ನ. 25 ಮತ್ತು ನಾಳೆ ನ. 26ರಂದು ರಾಜ್ಯ ರಾಜಧಾನಿಯಲ್ಲಿ ಮೋಡ ಮುಸುಕಿದ ವಾತಾವರಣವೇ ಇರಲಿದೆ. ಒಂದೆರಡು ಬಾರಿ ಗುಡುಗಿನಿಂದ ಕೂಡಿದ ಮಳೆ ಸುರಿಯುವ ಸಾಧ್ಯತೆಯೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net