ಬೇಲೂರಿನಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ

1blrp1
Published on

ಬೇಲೂರು: ಸತ್ತು ಬದುಕಿದವರ, ಇದ್ದು ಸತ್ತಂತಿರುವವರ ನಡುವೆ ಶ್ರೇಷ್ಠವೆಂದರೆ ಸತ್ತು ಬದುಕಿರುವವರೇ ಶ್ರೇಷ್ಠರು. ಸತ್ತು ಬದುಕಿರುವವರು ಈ ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಮಹಾತ್ಮರು, ಶರಣರು, ಸಂತರು ಬಾಳಿ ಬದುಕಿ, ಬದುಕಿಗೆ ಬೇಕಾದ ಮೌಲ್ಯಗಳನ್ನು ಕೊಟ್ಟಿದ್ದು ಅವುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಪುಷ್ಪಗಿರಿ  ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಟ್ರಸ್ಟ್, ನೌಕರರ ಕ್ಷೇಮಾಭಿವೃದ್ಧಿ ಸಂಘ, ಪುರೋಹಿತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ನಾಲ್ಕು ಯುಗಗಳನ್ನು ಮೀರಿ ನಿಂತಿದ್ದೇವೆ. ಹಿಂದೆ 100ಕ್ಕೆ 100ರಷ್ಟು ಸತ್ಯ ಹೇಳುತಿದ್ದರು. ಆಗ ಅವರ ಆಯಸ್ಸು 400 ವರ್ಷವಿತ್ತು. ನಂತರದಲ್ಲಿ ಮನುಷ್ಯನ ಆಯಸ್ಸು ಕ್ಷೀಣಿಸುತ್ತಿದೆ. ಕಲಿಯುಗದಲ್ಲಿ 50 ರಿಂದ 60 ವರ್ಷವಷ್ಟೇ ಆಯಸ್ಸು. 800-900 ವರ್ಷಗಳ ಹಿಂದೆ ಶರಣರು ಬದುಕಿಗೆ ಬೇಕಾದ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇಂದು 130 ಕೋಟಿ ಜನರಿದ್ದರೂ ಸತ್ತಂತೆ ಬದುಕುತಿದ್ದೇವೆ. ಇಲ್ಲಿ ಶರಣರ ಮೌಲ್ಯಗಳನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಾರೋ ಅವರ ಜೀವನ ಸಾರ್ಥಕವಾಗುತ್ತದೆ.118 ವರ್ಷಗಳ ನಂತರವೂ ಅವರನ್ನು ನೆನಪಿಸಿಕೊಳ್ಳುತ್ತೇವೆ. 80 ವರ್ಷಗಳ ಹಿಂದೆ ಕಷ್ಟಪಟ್ಟು ಸಂಸ್ಥೆ ಮತ್ತು ಮಠವನ್ನು ಕಟ್ಟಿದ್ದಾರೆ. ಅವರು ಶಿಕ್ಷಣ ಸಂಸ್ಥೆಯೊಂದಿಗೆ ದಾಸೋಹದ ಮೂಲಕ ಬಡವರ ಬದುಕಿನಲ್ಲಿ ಬೆಳಕಾಗಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅಡಗೂರು ಬಸವರಾಜ್, ವೀರಶೈವ ಲಿಂಗಾಯತ ರಾಜ್ಯ ಯುವ ಘಟಕದ ಕಾರ್ಯದರ್ಶಿ ವಿಕ್ರಂ ಕೌರಿ, ಮಹಿಳಾಧ್ಯಕ್ಷೆ ವಿಂಪು ಸಂತೋಷ್, ನೌಕರರ ಸಂಘದ ಅಧ್ಯಕ್ಷ ಪಾಲಾಕ್ಷ, ಮುಖಂಡರಾದ ರವಿಕುಮಾರ್, ಅದ್ದೂರಿ ಕುಮಾರ್, ಅರುಣ್‌ಕುಮಾರ್, ಹಾಲಪ್ಪ, ಮದನ್, ಸುನೀಲ್, ಹರೀಶ್, ಬಿ.ಬಿ.ಶಿವರಾಜ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net