

ರಾಣೆಬೆನ್ನೂರ: ಜಿಲ್ಲಾ ಯಾದವ ಸಂಘ ಹಾಗೂ ಬೇಲೂರು ಯಾವದ ಸಂಘದ ವತಿಯಿಂದ ಸೆ. 29ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಬೇಲೂರ ಗ್ರಾಮದ ಹಾಲಸ್ವಾಮಿ ಮಠದ ಆವರಣದಲ್ಲಿ ಶ್ರೀ ಕೃಷ್ಣ ಜಯಂತಿ ಹಾಗೂ ಜಿಲ್ಲಾ ಯಾದವ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಹೊನ್ನಪ್ಪ ಹಾಲಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 28ರಂದು ಮಧ್ಯಾಹ್ನ 3 ಗಂಟೆಗೆ ಗ್ರಾಮದಲ್ಲಿ ಶ್ರೀ ಕೃಷ್ಣನ ಭಾವಚಿತ್ರದ ಮೆರವಣಿಗೆ ಹಾಗೂ ಮಡಿಕೆ ಒಡೆಯುವ ಪ್ರದರ್ಶನ ಜರುಗಲಿದೆ.
ಸಮಾವೇಶದಲ್ಲಿ ಚಿತ್ರದುರ್ಗದ ಕೃಷ್ಣ ಯಾದವ ಮಹಾಸಂಸ್ಥಾನ ಮಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಬೇಲೂರು ಶಾಖಾಮಠದ ಶಿವಯೋಗಿ ಸ್ವಾಮೀಜಿ, ದಿಂಡಗಿಹಳ್ಳಿಯ ಪಶುಪತಿ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮಾಜದ ಜಿಲ್ಲಾಧ್ಯಕ್ಷ ಹೊನ್ನಪ್ಪ ಹಾಲಗಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಹಾಗೂ ಸಮಾಜದ ವಿವಿಧ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಡಾ. ಸೋಮಲಿಂಗಪ್ಪ ಚಿಕ್ಕಳವರ, ಕೆಂಪ್ಪಣ್ಣ ಗೊಲ್ಲರ, ಕುಮಾರ ಬೇಗೂರ, ಸಿ.ಎಂ. ತಂಗೋಡರ, ಬಿ.ಡಿ. ಸಿದ್ದಪ್ಪನವರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.