Ayodhya dispute: 'ರಾಮಜನ್ಮಭೂಮಿ ವಿವಾದದ ತೀರ್ಪು ನೀಡಿವುದಕ್ಕೂ ಮುನ್ನ ದೇವರಲ್ಲಿ ಪ್ರಾರ್ಥಿಸಿದ್ದೆ': ಸಿಜೆ ಚಂದ್ರಚೂಡ್

cj
Published on

ದೆಹಲಿ: ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ(Ayodhya dispute) ಪರಿಹಾರಕ್ಕಾಗಿ ತೀರ್ಪು ನೀಡುವುದಕ್ಕೂ ಮುನ್ನ ದೇವರಲ್ಲಿ ಪ್ರಾರ್ಥಿಸಿದ್ದೆ. ನಂಬಿಕೆ ಇದ್ದರೆ ದೇವರು ನಿಮಗೆ ದಾರಿ ತೋರಿಸುತ್ತಾನೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ದೇಶದ ಇತಿಹಾಸದಲ್ಲಿ ಶತಮಾನಗಳಿಂದ ಕಾಡಿದ್ದ ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಅಂತಿಮವಾಗಿ ನ್ಯಾಯಾಲಯ ತೀರ್ಪಿನೊಂದಿಗೆ ಇತ್ಯರ್ಥವಾಯಿತು. ಈ ಪ್ರಕರಣದ ತೀರ್ಪು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಪಂಚಸದಸ್ಯ ಪೀಠ 2019ರಲ್ಲಿ ತೀರ್ಪು ನೀಡಿರುವುದು ತಿಳಿದ ಸಂಗತಿಯೇ. ಬಳಿಕ ರಾಮಮಂದಿರ ನಿರ್ಮಾಣವಾಗಿದ್ದು ಇತಿಹಾಸ. ಆದರೆ ಈಗ
ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಹುಟ್ಟೂರಾದ ಮಹಾರಾಷ್ಟ್ರದ ಕನ್ಹರ್ಸರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಅವರನ್ನು ಸನ್ಮಾನಿಸಿದಾಗ ಈ ರೀತಿ ಹೇಳಿದರು.

ಆಗಾಗ್ಗೆ ಪ್ರಕರಣಗಳು ಬರುತ್ತವೆ. ಆದರೆ ಪರಿಹರಿಸಲು ತುಂಬಾ ಜಟಿಲವಾದವೂ ಬರುತ್ತವೆ. ನಾವು ಒಂದೇ ರೀತಿ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಆಗ ದೇವರನ್ನು ನೆನೆದು ಸಮಸ್ಯೆ ಪರಿಹರಿಸಲು ಶಕ್ತಿ ಮೀರಿ ಅಧ್ಯಯನ ಮಾಡಿ ತೀರ್ಪು ನೀಡುತ್ತೇವೆ ಎಂದರು.

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಸಂದರ್ಭದಲ್ಲಿ ಮೂರು ತಿಂಗಳ ಕಾಲ ನಮಗೆ ಅದೇ ಸಂಭವಿಸಿತು. ನಾನು ದೇವರ ಮುಂದೆ ನಿಂತು ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ಇನ್ನು ನಾನು ನಿತ್ಯ ದೇವರ ಪೂಜೆ ಮಾಡುತ್ತೇನೆ. ದೇವರಲ್ಲಿ ನಂಬಿಕೆ ಇದ್ದರೆ ಖಂಡಿತಾ ಸಮಸ್ಯೆ ಬಗೆಹರಿಯುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net