ಶಿಕ್ಷಕಿ ಎದುರೇ ಕೇಕ್ ಕತ್ತರಿಸಿ ತರಗತಿಯಲ್ಲೇ Beer ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ತನಿಖೆಗೆ ಆದೇಶ, ವಿಡಿಯೋ ವೈರಲ್​

College Celebration
Published on

ಭೋಪಾಲ್​: ತರಗತಿಯಲ್ಲಿ ಶಿಕ್ಷಕ ಇರುವಾಗಲೇ ವಿದ್ಯಾರ್ಥಿಗಳ ಗುಂಪೊಂದು ಕೇಕ್ ಕತ್ತರಿಸಿ ಬಿಯರ್ (Beer) ಪಾರ್ಟಿ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್‌ ಜಿಲ್ಲೆಯಲ್ಲಿ ನಡೆದಿದೆ. 

ಘಟನೆಯು ಸರ್ಕಾರಿ ಹನುಮಾನ್ ಕಾಲೇಜಿನಲ್ಲಿ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

College Celebration

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಓರ್ವ ವಿದ್ಯಾರ್ಥಿ ಕೇಕ್​ಅನ್ನು ಕತ್ತರಿಸುತ್ತಿದ್ದು, ಇನ್ನೋರ್ವ ಬಿಯರ್ (Beer) ಬಾಟಲಿಯನ್ನು ಓಪನ್ ಮಾಡಿ ಸಂಭ್ರಮಿಸುತ್ತಿರುವುದನ್ನು ನೋಡಬಹುದಾಗಿದೆ. ಇತರರು ಚಪ್ಪಲೆ ತಟ್ಟುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಘಟನೆಯು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ತರಗತಿಯಲ್ಲಿದ್ದ ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನೂ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದು, ವರದಿ ಆಧರಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net