ಜೇನು ಸಾಕಣೆ ಲಾಭದಾಯಕ

honey bee
ಆನಂದಪುರ ಸಮೀಪದ ಇರುವಕ್ಕಿಯ ಕೃಷಿ ವಿವಿಯಿಂದ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾನಾಯ್ಕ ಉದ್ಘಾಟಿಸಿದರು. ಜಯಲಕ್ಷ್ಮೀ ಹೆಗಡೆ, ಬಿ.ಎಸ್. ಮಹಾಬಲೇಶ್ವರ, ಕೃಷ್ಣ ರೆಡ್ಡಿ, ಆರ್.ದರ್ಶನ ಇತರರಿದ್ದರು.
Published on

ಆನಂದಪುರ: ಮುಖ್ಯ ಕೃಷಿಯ ಜತೆ ಜೇನು ಕೃಷಿ ನಡೆಸಿದರೆ ಲಾಭದಾಯಕ ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾನಾಯ್ಕ ತಿಳಿಸಿದರು.

ಅರಳಿಕೊಪ್ಪದ ಮಧುವನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ಜೇನು ಸಾಕಣೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜೇನು ಸಾಕಣೆಯೊಂದು ಉತ್ತಮ ಉಪಕಸುಬು ಆಗಬಲ್ಲದು. ಜೇನು ಕೃಷಿಯಲ್ಲಿ ಶ್ರಮ ಕಡಿಮೆ. ಜೇನು ಹುಳುಗಳು ಹೂವಿನಿಂದ ಹೂವಿಗೆ ಮಕರಂದ ಹೀರುತ್ತ ಓಡಾಡುವ ಕಾರಣ ಪರಾಗಸ್ಪರ್ಶ ಕಾರ್ಯ ನಡೆದು ಸಲು ಸಹ ಹೆಚ್ಚಾಗುತ್ತದೆ. ಮಲೆನಾಡಿನ ವಾತಾವರಣ ಜೇನು ಕೃಷಿಗೆ ಉತ್ತಮ ಎಂದರು.

ಕಲ್ಮನೆ ಗ್ರಾಪಂ ಅಧ್ಯಕ್ಷ ಅಮರನಾಥ ಮಾತನಾಡಿ, ಕೃಷಿ ಜತೆಗೆ ಉಪಕಸುಬಾಗಿ ಇಂತಹ ತರಬೇತಿ ಹೆಚ್ಚು ಅಗತ್ಯವಿದೆ ಎಂದರು. ಯಶಸ್ವಿ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆ, ನಾಗೇಂದ್ರ ಸಾಗರ್, ವಿಘ್ನೇಶ ತಲಕಾಲಕೊಪ್ಪ ತಮ್ಮ ಅನುಭವ ಹಂಚಿಕೊಂಡರು.

ವಿವಿಯ ನೋಡೆಲ್ ಅಧಿಕಾರಿ ಜಯಲಕ್ಷ್ಮೀ ಹೆಗಡೆ, ಸಾಗರ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಬಿ.ಎಸ್. ಮಹಾಬಲೇಶ್ವರ, ಸಹಾಯಕ ಪ್ರಾಧ್ಯಾಪಕ ಕೃಷ್ಣ ರೆಡ್ಡಿ, ಆರ್.ದರ್ಶನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net