ಕಿಕ್ಕೇರಿ: ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ರೈತ ಬಾಬು ತೀವ್ರ ಗಾಯಗೊಂಡಿದ್ದಾರೆ. ಇವರು ಭಾನುವಾರ ತಮ್ಮ ಜಮೀನನಲ್ಲಿ ಕೆಲಸ ಮಾಡುವಾಗ ಮರದಲ್ಲಿ ಗೂಡು ಕಟ್ಟಿಕೊಂಡಿದ್ದ ಜೇನುಹಿಂಡು ದಾಳಿ ಮಾಡಿವೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಇಡೀ ಜಮೀನು ಸುತ್ತ ಓಡಾಡಿದ್ದಾರೆ. ಮುಖದಲ್ಲಿ ಗಂಭೀರ ಗಾಯವಾಗಿ ಹೆಜ್ಜೇನುವಿನಿಂದ ತಪ್ಪಿಸಿಕೊಳ್ಳಲು ಇಡೀ ಜಮೀನಿನಲ್ಲಿ ಓಡಾಡಿದ್ದಾರೆ. ಬಳಿಕ ಕಿಕ್ಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.