ವಿಜಯವಾಣಿ ವರದಿ ಫಲಶ್ರತಿ: ಬಿ.ಇಡಿ ಸೀಟು ದಂಧೆ ತನಿಖೆ ಶುರು

Raghu_04_UPSC_Exams_@_RC_College (1)
students
Published on

ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸೀಟು ಮಾರಾಟ ದಂಧೆ ನಡೆಸುತ್ತಿರುವ ಬಿ.ಇಡಿ. ಕಾಲೇಜುಗಳನ್ನು ಪತ್ತೆಹಚ್ಚುವ ಕಾರ್ಯ ಪ್ರಾರಂಭವಾಗಿದೆ ಎಂದು ಕುಲಪತಿ ಪ್ರೊ.ಸಿದ್ದು ಅಲಗೂರು ತಿಳಿಸಿದ್ದಾರೆ.

ಖಾಸಗಿ ಕಾಲೇಜುಗಳ ಸೀಟು ದಂಧೆ ಕುರಿತು ಮಾ.5ರಂದು ವಿಜಯವಾಣಿ ಮುಖಪುಟದಲ್ಲಿ ‘ಮಾರಾಟಕ್ಕಿದೆ ಬಿ.ಇಡಿ. ಕಾಲೇಜು ಸೀಟ್..!’ ಶೀರ್ಷಿಕೆಯಡಿ ಪ್ರಕಟವಾಗಿದ್ದ ತನಿಖಾ ವರದಿ ಪರಿಗಣಿಸಿ ಈ ಕ್ರಮಕೈಗೊಳ್ಳಲಾಗಿದೆ. ‘ಪತ್ರಿಕೆಯ ತನಿಖಾ ವರದಿಯನ್ನು ಗಮನಿಸಿದ್ದೇನೆ. ವಿ.ವಿ ವ್ಯಾಪ್ತಿಯ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ 20 ಬಿ.ಇಡಿ. ಕಾಲೇಜುಗಳ ಪೈಕಿ ಕೆಲವೆಡೆ ಅಕ್ರಮ ನಡೆಯುತ್ತಿರುವ ಬಗ್ಗೆ ವರದಿ ಬೆಳಕು ಚೆಲ್ಲಿದೆ. ತಪ್ಪಿತಸ್ಥ ಕಾಲೇಜುಗಳನ್ನು ಬಿಡುವ ಪ್ರಮೇಯವೇ ಇಲ್ಲ’ ಎಂದು ಕುಲಪತಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ಬಿ.ಇಡಿ. ಪ್ರವೇಶ ನಡೆಯುತ್ತಿದೆ. ಸೀಟ್​ಗಳನ್ನು ಸರ್ಕಾರ ಅಲಾಟ್​ವೆುಂಟ್ ಮಾಡಿದ ಬಳಿಕ ಖಾಸಗಿ ಸೀಟ್​ಗಳನ್ನು ಕಾಲೇಜು ಆಡಳಿತ ಮಂಡಳಿಗಳು ಮಾರಾಟ ಮಾಡಿಕೊಳ್ಳುತ್ತಿರುವ ಸಾಧ್ಯತೆ ಹೆಚ್ಚು. ನಾನು ಕುಲಪತಿಯಾದ ಬಳಿಕ ಸಾಧ್ಯವಾದಷ್ಟು ಅಕ್ರಮ ತಡೆಗೆ ಶ್ರಮಿಸುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net