ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳಿ

Become a member of the Mahasabha
ಇಂಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯ ವಿ.ಸಿ. ನಾಗಠಾಣ ಉದ್ಘಾಟಿಸಿದರು. ಡಾ. ರಾಜಶೇಖರ ಕೋಳೆಕರ, ಶಿವಾನಂದ ಪೂಜಾರಿ, ಕಿರಣ ಶೇಖದಾರ ಇತರರಿದ್ದರು.
Published on

ಇಂಡಿ: ವೀರಶೈವ ಲಿಂಗಾಯತ ಧರ್ಮ ವಿಶಾಲ ಮತ್ತು ಅತ್ಯಂತ ಹಳೆಯದಾಗಿದ್ದು, ಹೆಚ್ಚಿನ ಸಂಖ್ಯೆಯ ವೀರಶೈವರು ಸದಸ್ಯತ್ವ ಪಡೆದುಕೊಳ್ಳಬೇಕೆಂದು ಅಖಿಲ ಭಾರತ ವಿರಶೈವ ಮಹಾಸಭಾ ಜಿಲ್ಲಾಧ್ಯ ವಿ.ಸಿ. ನಾಗಠಾಣ ಹೇಳಿದರು.

ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂದ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇಂಡಿ ಟಕವು ಭಗವಾನ ಸತ್ಯಸಾಯಿಬಾಬಾ ಜನ್ಮದಿನ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ವಿದ್ಯಾವರ್ಧಕ ಸಂದ ಅಧ್ಯ ಬಸವರಾಜ ಕುಮಸಗಿ ಅಧ್ಯತೆ ವಹಿಸಿದ್ದರು. ಕದಳಿ ವೇದಿಕೆ ಅಧ್ಯೆ ಗಂಗಾಬಾಯಿ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ರಾಜಶೇಖರ ಕೋಳೆಕರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸತ್ಯಸಾಯಿ ಸೇವಾ ಸಂಸ್ಥೆ ಸಮಿತಿ ಅಧ್ಯ ಕಿರಣ ಶೇಖದಾರ, ಕೆ.ವಿ.ವಿ. ಉಪಾಧ್ಯ ಸಂಗಣ್ಣ ಈರಾಬಟಿ, ಕಾರ್ಯದರ್ಶಿ ಪಿ.ಬಿ. ಕತ್ತಿ, ಸಾಯಿ ಪಬ್ಲಿಕ್​ ಶಾಲೆ ಕಾರ್ಯದರ್ಶಿ ಶಿವಾನಂದ ಕೊಪ್ಪಾ, ವಿಶ್ವನಾಥ ಲಬ್ಬಾ ಇದ್ದರು.

ಸಿ.ಎಸ್​. ಪೂಜಾರಿ ಸ್ವಾಗತಿಸಿದರು. ಎಸ್​.ಎಸ್​. ಉಟಗಿ ವಂದಿಸಿದರು. ಡಿ.ಎಸ್​. ಮಠಪತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net