ಡ್ರೋನ್​ನಲ್ಲಿ ಸೆರೆಯಾಯ್ತು ಕರಡಿಗಳ ತುಂಟಾಟ! ಇಲ್ಲಿದೆ ನೋಡಿ ವಿಡಿಯೋ... | Bear

untitled-design-15-68791a613d7d4
Published on

ರಾಮನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ರೇವಣಸಿದ್ದೇಶ್ವರ ಬೆಟ್ಟದ ಪಕ್ಕದಲ್ಲಿರುವ ಮತ್ತೊಂದು ಬೆಟ್ಟದ ತುದಿಯಲ್ಲಿ ತಾಯಿ ಕರಡಿಯೊಂದಿಗೆ(Bear) ಅದರ ಮರಿ ಆಟವಾಡುತ್ತಿರುವ ದೃಶ್ಯವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ರೇವಣಸಿದ್ದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಡ್ರೋಣ್ ಕ್ಯಾಮರಾ ‌ಮೂಲಕ ಕರಡಿ ‌ಮತ್ತು ಅದರ ಮರಿಯ ಆಟ ಸೆರೆ ಹಿಡಿದಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ತನ್ನ ಮರಿಯೊಂದಿಗೆ ಕರಡಿ ಆಟವಾಡುವ ನೃತ್ಯ ಮಾಡುವ ದೃಶ್ಯ ಡ್ರೋನ್​ನಲ್ಲಿ‌ ಸೆರೆಯಾಗಿದೆ. ಅಲ್ಲದೆ, ಡ್ರೋನ್​ ಬರುತ್ತಿದ್ದಂತೆ ಎರಡು ತುಂಟಾ ಮರಿಗಳು ಪೋಸ್ ಕೊಟ್ಟಿರುವ ಸ್ಟೈಲ್​ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇನ್ನು ಈ ವಿಡಿಯೋಗೆ ಸಾಕಷ್ಟು ಲೈಕ್‌ ದೊರೆತಿದೆ. ಇನ್ನು ಡ್ರೋಣ್ ಸದ್ದು ಕೇಳಿ ಕರಡಿ ಮರಿಯೊಂದಿಗೆ ಕಲ್ಲಿನ ಪೊಟರೆಯೊಳಕ್ಕೆ‌ಸೇರಿ ಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net