ಪ್ರತಿಫಲ ಸಿಗುವವರೆಗೆ ತಾಳ್ಮೆಯಿಂದಿರಿ

09 HANUR 1
Published on

ಸುದ್ದಿಜಾಲ ಹಗರಿಬೊಮ್ಮನಹಳ್ಳಿ: ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕಾಗಿ ನಡೆದಿರುವ ಹೋರಾಟಕ್ಕೆ ಕೈಜೋಡಿಸುವುದಾಗಿ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

17 ಕೆರೆಗಳಿಗೆ ನೀರು ತುಂಬಿಸುವ ಶಾಶ್ವತ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹನಸಿ ಗ್ರಾಮದಲ್ಲಿ ಸೋಮವಾರ ಕರೆಯಲಾಗಿದ್ದ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು. ಮರಿಯಮ್ಮನಹಳ್ಳಿಯ ಡಣಾಯಕನಕೆರೆಗಾಗಿ ಸಾಕಷ್ಟು ಹೋರಾಟ ಮಾಡಿದ ನಂತರ ಕಾರ್ಯ ಕೈಗೂಡಿತ್ತು. ಅದರಂತೆ ಇಲ್ಲ್ಲಿಯೂ ಹೋರಾಟಕ್ಕೆ ಪ್ರತಿಫಲ ಸಿಗುವವರೆಗೆ ತಾಳ್ಮೆಯಿಂದರಬೇಕು ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ರೈತರಿಗೆ ಪ್ರಮುಖವಾಗಿರುವ ಶಾಶ್ವತ ನೀರೊದಗಿಸುವ ಯೋಜನೆಯನ್ನು ಸರ್ಕಾರ ಕೂಡಲೆ ಕೈಗೆತ್ತಿಕೊಳ್ಳಬೇಕು. ಇದಕ್ಕಾಗಿ 17 ಕೆರೆಗಳ ವ್ಯಾಪ್ತಿಯ ನಮ್ಮ ಹೋರಾಟ ಸಮಿತಿ ಸಂಚಾಲಕರನ್ನು ರೂಪಿಸಲಾಗುತ್ತಿದೆ. ಬಳಿಕ ಹೋರಾಟದ ರೂಪುರೇಷೆಗಳೊಂದಿಗೆ ಕಾರ್ಯ ಕೈಗೂಡುವವರೆಗೂ ಪ್ರಯತ್ನಿಸಲಾಗುವುದು. ಈಗಾಗಲೇ ವಿಸ್ತೃತ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅನುಷ್ಠಾನ ಬಾಕಿ ಇದೆ ಎಂದರು.

ಕೆರೆ ಹೋರಾಟ ಸಮಿತಿ ಪ್ರಮುಖರಾದ ನಿಂಗಪ್ಪ, ಮಲ್ಲಿಕಾರ್ಜುನ್, ಅಂಜಿನಪ್ಪ, ಸಿ.ಎಂ.ಪ್ರಭು, ಎಸ್.ಎಂ.ಚನ್ನವೀರಸ್ವಾಮಿ, ಮಂಜುನಾಥಯ್ಯ, ಎಂ.ಬಸವರಾಜ, ಜಿ.ಪ್ರಕಾಶ, ಕರಿಬಸವರಾಜ, ಕಲ್ಲಳ್ಳಿ ಜಾತಪ್ಪ, ಜಿ.ಹನುಮಂತಪ್ಪ, ಡಿಚ್ಚಿ ಕೊಟ್ರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net